ಸಮುದಾಯ ಒಗ್ಗೂಡಿದಾಗ ಪ್ರಗತಿ ಸಾಧ್ಯ

22raju7
Published on

ಚಾಮರಾಜನಗರ: ಸಹಕಾರ ಸಂಘ ಸ್ಥಾಪನೆಯಿಂದ ಮಾದಿಗ ಸಮುದಾಯದ ಪ್ರಗತಿ ಸಾಧ್ಯ ಎಂದು ಕೆಎಂಎಫ್ ನಿವೃತ್ತ ಉಪನಿರ್ದೇಶಕ ಜವರಯ್ಯ ಹೇಳಿದರು

ನಗರದ ರೋಟರಿ ಭವನದಲ್ಲಿ ಜಿಲ್ಲಾ ಅರುಂಧತಿ ಕ್ರೆಡಿಟ್ ಆಪರೇಟಿವ್ ಸೊಸೈಟಿ ಸ್ಥಾಪಿಸುವ ಉದ್ದೇಶದಿಂದ ಆಯೋಜಿಸಿದ್ದ, ಪ್ರಮೋಟರ್ಸ್‌ಗಳ ವಿಶೇಷ ಕಾರ್ಯಾಗಾರದಲ್ಲಿ ಭಾಗವಹಿಸಿ ಮಾತನಾಡಿದರು.

ಜಿಲ್ಲೆಯ ಎಲ್ಲಾ ತಾಲೂಕಿನ ಸಮುದಾಯದ ಯುವಕರು ಹಾಗೂ ಹಿರಿಯರು ಒಂದಾಗಿ ಸಾಗಬೇಕು. ಸಹಕಾರ ಮನೋಭಾವ, ಪರಸ್ಪರ ವಿಶ್ವಾಸ, ನಂಬಿಕೆಯ ಮೇಲೆ ಸಮುದಾಯ ಒಗ್ಗೂಡಿದಾಗ ಪ್ರಗತಿ ಸಾಧ್ಯ ಪ್ರಗತಿ ಸಾಧ್ಯವಾಗುತ್ತದೆ. ಸಹಕಾರ ಸಂಘವೂ ಪ್ರಜಾಪ್ರಭಯತ್ವದ ವ್ಯವಸ್ಥೆಯಲ್ಲಿ ಇರುವಂತಹ ಒಂದು ಸ್ವಾಯುತ್ತ ಸಂಸ್ಥೆಯಾಗಿದೆ. ಸಮುದಾಯದವರು ಹೆಚ್ಚಿನ ಸದಸ್ಯತ್ವ ಪಡೆದುಕೊಳ್ಳುವ ಮೂಲಕ ಅಭಿವೃದ್ದಿ ಸಂಘದಿಂದ ಕಡಿಮೆ ಬಡ್ಡಿದರದಲ್ಲಿ ಸಾಲಸೌಲಭ್ಯ ಪಡೆದುಸ್ವಯಂ ಉದ್ಯೋಗಿಗಳಾಗಿ ಆರ್ಥಿಕವಾಗಿ ಸಬಲರಾಗಬೇಕು ಎಂದರು.

ಕರ್ನಾಟಕ ಕನ್ನಡ ರಕ್ಷಣಾ ವೇದಿಕೆ ಅಧ್ಯಕ್ಷ ಚಾ.ಗು.ನಾಗರಾಜು, ಸಹಕಾರ ಸಂಘಗಳ ನಿವೃತ್ತ ಉಪನಿರ್ದೇಶಕ ಇರಸವಾಡಿ ಸಿ.ಮಹದೇವಯ್ಯ, ನಿವೃತ್ತ ಸಿನಿಯರ್ ಆಡಿಟ್ ರೇವಣ್ಣ, ನಿವೃತ್ತ ನೌಕರ ಚಿಕ್ಕಮಾದಯ್ಯ, ಗುತ್ತಿಗೆದಾರ ಕಾಗಲವಾಡಿ ಮಹದೇವಸ್ವಾಮಿ, ನಾಗರಾಜು, ವಕೀಲ ಬೂದಿತಿಟ್ಟು ರಾಜೇಂದ್ರ, ಪುಟ್ಟರಾಜು, ನಿವೃತ್ತ ಸಹಾಯಕ ಪೊಲೀಸ್ ಅಧಿಕಾರಿ ಬಿ.ಸಿದ್ದಯ್ಯ, ಹಸಗೂಲಿ ಸಿದ್ದಯ್ಯ, ದ್ವಾರ್ಕಿ ಬಸವರಾಜು, ಎಂ.ಶಿವಕುಮಾರ್, ರಾಮಸಮುದ್ರ ಶಿವು, ಸಂತೇಮರಹಳ್ಳಿ ರಾಜು, ಚನ್ನಬಸವಯ್ಯ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net