ಡಿಬಿಟಿ ಮೂಲಕ ಮೂಲಕ ಹಣ ಜಮಾವಣೆ

18CHN4 JILLADALITHA BAVAN
Published on

ಚಾಮರಾಜನಗರ: ಬ್ಯಾಂಕ್ ಖಾತೆಗಳ ತಾಂತ್ರಿಕ ದೋಷದ ಕಾರಣಗಳಿಂದಾಗಿ ಡಿಬಿಟಿ ಮೂಲಕ ಮೂಲಕ ಹಣ ವರ್ಗಾಯಿಸಲು ಸಾಧ್ಯವಾಗದೇ ಇರುವ ಪಡಿತರ ಫಲಾನುಭವಿಗಳು ಖಾತೆಗೆ ಹಣ ಜಮಾವಣೆಯಾಗದಿರುವ ಬಗ್ಗೆ ಮಾಹಿತಿ ಪಡೆದುಕೊಳ್ಳಲು ಜಿಲ್ಲೆಯಲ್ಲಿ ತಾಲ್ಲೂಕುವಾರು ಸಹಾಯವಾಣಿಗಳನ್ನು ತೆರೆಯಲಾಗಿದ್ದು, ಪಡಿತರ ಚೀಟಿದಾರರು ನಗದು ವರ್ಗಾವಣೆ ಬಗ್ಗೆ ಸಮಸ್ಯೆಗಳಿದ್ದಲ್ಲಿ ಅಧಿಕಾರಿಗಳನ್ನು ಸಂಪರ್ಕಿಸಲು ಆಹಾರ ಇಲಾಖೆ ತಿಳಿಸಿದೆ.

ಚಾಮರಾಜನಗರ ತಾಲೂಕಿನ ಆಹಾರ ಶಿರಸ್ತೇದಾರ ವಿ.ಆರ್. ಮಹೇಶ್ ಕುಮಾರ್ (ಮೊ.ಸಂ 9448203012), ಕಸಬಾ, ಹರದನಹಳ್ಳಿ, ಚಂದಕವಾಡಿ ಮತ್ತು ಹರವೆ ಹೋಬಳಿಯ ಆಹಾರ ನಿರೀಕ್ಷಕ ದಿನಕರ್ (ಮೊ.ಸಂ 8073701867), ಸಂತೇಮರಹಳ್ಳಿ ಹೋಬಳಿಯ ಆಹಾರ ನಿರೀಕ್ಷಕಿ ಗೀತಾ (ಮೊ.ಸಂ 9902120651), ಗುಂಡ್ಲುಪೇಟೆ ತಾಲೂಕಿನ ಆಹಾರ ಶಿರಸ್ತೇದಾರ ರಮೇಶ್ (ಮೊ.ಸಂ 9164778495), ಆಹಾರ ನಿರೀಕ್ಷಕಿ ಪೂರ್ಣಿಮಾ (ಮೊ.ಸಂ 7892389220), ಕೊಳ್ಳೇಗಾಲ ತಾಲೂಕಿನ ಆಹಾರ ಶಿರಸ್ತೇದಾರ ಎಸ್. ವಿಶ್ವನಾಥ್ (ಮೊ.ಸಂ 8453500797), ಆಹಾರ ನಿರೀಕ್ಷಕ ಎನ್.ಎಂ. ಪ್ರಸಾದ್ (ಮೊ.ಸಂ 7760121521), ಹನೂರು ತಾಲೂಕಿನ ಆಹಾರ ನಿರೀಕ್ಷಕ ಬಸವರಾಜು (ಮೊ.ಸಂ 7892968774), ಯಳಂದೂರು ತಾಲೂಕಿನ ಆಹಾರ ನಿರೀಕ್ಷಕ ಬಿಸಲಯ್ಯ (ಮೊ.ಸಂ 9902039929) ಸಂಪರ್ಕಿಸುವಂತೆ ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೆಶಕ ಯೋಗಾನಂದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net