ಡಾ.ನಿರ್ಮಲಾನಂದನಾಥಸ್ವಾಮೀಜಿ ಜನ್ಮದಿನಾಚರಣೆ

21raju2
Published on

ಚಾಮರಾಜನಗರ: ತಾಲೂಕು ಒಕ್ಕಲಿಗರ ಸಂಘದ ವತಿಯಿಂದ ಡಾ. ಶ್ರೀನಿರ್ಮಲಾನಂದನಾಥ ಸ್ವಾಮೀಜಿ ಜನ್ಮದಿನಾಚರಣೆಯನ್ನು ಆಚರಿಸಲಾಯಿತು.

ನಗರದ ಕೊಳದ ಬೀದಿಯಲ್ಲಿರುವ ಒಕ್ಕಲಿಗರ ಸಮುದಾಯ ಭವನದಲ್ಲಿ ತಾಲೂಕ ಒಕ್ಕಲಿಗರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಡಾ.ಶ್ರೀನಿರ್ಮಲಾನಂದಸ್ವಾಮೀಜಿ ಅವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಕೆ.ಪುಟ್ಟಸ್ವಾಮಿಗೌಡ ಹಾಗೂ ಪದಾಧಿಕಾರಿಗಳು ಪುಷ್ಪಾರ್ಚನೆ ಮಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಕೆ.ಪುಟ್ಟಸ್ವಾಮಿಗೌಡ ಮಾತನಾಡಿ, ಶ್ರೀಕ್ಷೇತ್ರ ಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧ್ಯಕ್ಷರಾದ ಶ್ರೀ ಡಾ. ನಿರ್ಮಲಾನಂದನಾಥ ಸ್ವಾಮೀಜಿಗೆ ಉತ್ತಮಆರೋಗ್ಯವನ್ನು ಕರುಣಿಸಲಿ ಎಂದು ಪ್ರಾರ್ಥಿಸಿದರು.
ಆದಿ ಚುಂಚನಗಿರಿ ಮಠವು ಕರ್ನಾಟಕ ರಾಜ್ಯ ಒಂದೆ ಅಲ್ಲದೆ ದಕ್ಷಣ ಭಾರತ ಪ್ರಸಿದ್ಧ ಮಠವಾಗಿದೆ. ಧರ್ಮಕ್ಷೇತ್ರ ತಪೋಭೂಮಿ ಎಂದೇ ಪ್ರಸಿದ್ಧಿ ಪಡೆದಿರುವ ಆದಿ ಚುಂಚನಗಿರಿ ಮಠವು ಸುಮಾರು 2000 ವರ್ಷಗಳ ಇತಿಹಾಸವನ್ನು ಹೊಂದಿದೆ. ಸ್ವಾತಂತ್ರ್ಯದ ನಂತರದಲ್ಲಿ ಮಠದ ಜವಾಬ್ದಾರಿಯನ್ನು ವಹಿಸಿದ ಡಾ. ಬಾಲಗಂಗಾಧರನಾಥ ಸ್ವಾಮೀಜಿಯವರು ತಮ್ಮ ಆಡಳಿತದಲ್ಲಿ ದಾಸೋಹ ಮತ್ತು ಜನರ ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗಿ ಮಠವನ್ನು ಉನ್ನತ ಸ್ಥಾನದಲ್ಲಿ ಕೊಂಡೊಯ್ಯಲು ಶ್ರಮಿಸಿದರು ಎಂದರು.

ತಾಲೂಕು ಒಕ್ಕಲಗರ ಸಂಘ ಉಪಾಧ್ಯಕ್ಷ ಪಿ.ಎಚ್. ರಾಜು, ಸಹ ಕಾರ್ಯದರ್ಶಿ ಸಿ.ಬಿ.ನಾಗೇಂದ್ರ, ನಿರ್ದೇಶಕರಾದ ಚಿನ್ನಮುತ್ತು, ಮಹೇಶಗೌಡ, ಸೋಮಶೇಖರ್,ವಿ.ರಘುನಾಥ್, ಪಣ್ಯದಹುಂಡಿ ರಾಜು, ಮುಖಂಡರಾದ ಚಾ.ರಂ.ಶ್ರೀನಿವಾಸಗೌಡ, ಗೋವಿಂದಗೌಡ, ಸತೀಶ್ ಹೊಸೂರು, ರಘು ಕರಿಯನಕಟ್ಟೆ, ಹೊಮ್ಮ ಲೋಕೇಶ್, ವಿ.ಪಿ.ನಾಗರಾಜು, ನಾಗರಾಜು ಕರಿಯನಕಟ್ಟೆ, ರಮೇಶ್, ಚಿನ್ನಸ್ವಾಮಿ, ನಂಜುಂಡಸ್ವಾಮಿ, ಮಾದೇಶ್, ನಿಂಗರಾಜು ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net