ವಿಷ ಮಿಶ್ರಿತ ನೀರು ಕುಡಿದು ಹಸುಗಳ ಸಾವು

Published on

ಚಾಮರಾಜನಗರ: ವಿಷಮಿಶ್ರಿತ ನೀರು ಕುಡಿದು ಎರಡು ಹಾಲು ಕರೆಯುವ ಹಸು ಹಾಗೂ ಒಂದು ಕರು ಮೃತಪಟ್ಟಿದೆ.

ತಾಲೂಕಿನ ದ್ಯಾವಲಾಪುರ ಗ್ರಾಮದ ನಿವಾಸಿ ರಂಗಯ್ಯ ಅವರಿಗೆ ಸೇರಿದ ಸುಮಾರು 1.20 ಲಕ್ಷ ರೂ. ಮೌಲ್ಯದ ಎರಡು ಹಸುಗಳು ಹಾಗೂ ಒಂದು ಕರು ವಿಷ ಮಿಶ್ರಿತ ನೀರು ಕುಡಿದು ಭಾನುವಾರ ಮೃತಪಟ್ಟಿದೆ. ಯಾರೋ ಕಿಡಿಗೇಡಿಗಳು ಹಸುಗಳ ಕುಡಿಯುವ ನೀರಿಗೆ ವಿಷ ಮಿಶ್ರಣ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ವಿಷಯ ತಿಳಿದು ಸ್ಥಳಕ್ಕೆ ವೈದ್ಯಾಧಿಕಾರಿ ಡಾ.ನಿಶ್ಚಿತ್ ಆಗಮಿಸಿ ಪರಿಶೀಲನೆ ನಡೆಸಿ, ಹಸುಗಳ ಮೃತದೇಹದ ತಪಾಸಣೆ ನಡೆಸಿದರು.

ತುಂಬಾ ಕಷ್ಟದ ಪರಿಸ್ಥಿತಿಯಲ್ಲಿ ಇದ್ದ ರಂಗಯ್ಯನ ಕುಟುಂಬಕ್ಕೆ ಹಸುಗಳೇ ಆಧಾರಿತವಾಗಿತ್ತು. ಸಂಬಂಧ ಪಟ್ಟ ಇಲಾಖೆಯವರು ರೈತ ರಂಗಯ್ಯನ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಗ್ರಾಮ ಪಂಚಾಯಿತಿ ಸದಸ್ಯ ದ್ಯಾವಲಪುರ ಶಿವಣ್ಣ ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net