

ಚಾಮರಾಜನಗರ: ಮಲೆಯೂರು ಗ್ರಾಮ ಪಂಚಾಯತಿ ನೂತನ ಅಧ್ಯಕ್ಷೆಯಾಗಿ ಬಿಜೆಪಿ ಬೆಂಬಲಿತ ಮಹಾಲಕ್ಷ್ಮಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ತಾಲೂಕಿನ ಮಲೆಯೂರು ಗ್ರಾಮದ ಗ್ರಾಮ ಪಂಚಾಯತಿ ಕಚೇರಿಯಲ್ಲಿ ಮಾಜಿ ಅಧ್ಯಕ್ಷೆ ಮಹದೇವಮ್ಮ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಮಹಾಲಕ್ಷ್ಮಿ ಒಬ್ಬರೆ ನಾಮಪತ್ರ ಸಲ್ಲಿಸಿದ್ದರು. ಇತರರು ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿ ನೂತನ ಅಧ್ಯಕ್ಷರ ಆಯ್ಕೆಯನ್ನು ಪ್ರಕಟಿಸಿದರು.
ಸಭೆಯಲ್ಲಿ ಸದಸ್ಯರಾದ ಎಂ.ಬಿ.ಮಹದೇವಪ್ಪ, ಪುಟ್ಟಸ್ವಾಮಿ, ನವೀನ್, ರಾಜಪ್ಪ, ನಾಗೇಂದ್ರ, ಗಿರೀಶ್, ಮಾದೇಶ್, ಮಹದೇವಮ್ಮ, ಪಾರ್ವತಮ್ಮ, ಚಿಕ್ಕತಾಯಮ್ಮ, ಕೋಮಲ, ಪಂಕಜಾ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶೃತಿ ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಮಲೆಯೂರು ನಾಗೇಂದ್ರ, ಎಂ.ಬಿ. ಶಿವಮಲ್ಲಪ್ಪ, ಗೌಡಿಕೆ ರೇವಣ್ಣ, ಎಂ.ಎಲ್.ರೇವಣ್ಣ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮೂಡ್ನಾಕೂಡುಪ್ರಕಾಶ್, ಮಹಿಳಾ ಮೋರ್ಚಾದ ಜಿಲ್ಲಾಧ್ಯಕ್ಷೆ ಮಲೆಯೂರು ಕಮಲಮ್ಮ, ಆಶಾ, ಮೂಡ್ನಾಕೂಡು ಶಿವಬಸಪ್ಪ, ಕುಮಾರ್, ಪ್ರಕಾಶ್, ಎಂ.ಸಿ.ಮಲ್ಲಣ್ಣ, ನಾಗಭೂಷಣ್, ಎಂ.ಸಿ.ಬಸವಶೆಟ್ಟಿ, ಉಮೇಶ್ ಇತರರು ಹಾಜರಿದ್ದರು.