ಮದಕರಿನಾಯಕರ ಜಯಂತಿ ಆಚರಣೆ

13rajesh3
Published on

ಚಾಮರಾಜನಗರ: ನಾಯಕ ಸಮುದಾಯದ ವತಿಯಿಂದ ವೀರಮದಕರಿನಾಯಕ ಜಯಂತಿಯನ್ನು ಭಾನುವಾರ ಆಚರಿಸಲಾಯಿತು.

ನಗರದ ನಾಯಕರ ಸಾರ್ವಜನಿಕ ವಿದ್ಯಾರ್ಥಿ ನಿಲಯ ಆವರಣದಲ್ಲಿ ನಡೆದ ಜಿಲ್ಲಾ ಮಟ್ಟದ ನಾಯಕ ಸಮುದಾಯದ ಮುಖಂಡರ ಸಭೆಯಲ್ಲಿ ವೀರಮದಕರಿನಾಯಕ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಆಚರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ನಾಯಕರ ಸಂಘದ ಉಪಾಧ್ಯಕ್ಷ ಪು.ಶ್ರೀನಿವಾಸ ನಾಯಕ ಮಾತನಾಡಿ, ಜಿಲ್ಲಾಡಳಿತ ಬಹುವರ್ಷಗಳಿಂದಲೂ ವಾಲ್ಮೀಕಿ ಪುತ್ಥಳಿ ನಿರ್ಮಿಸಲು ತಾರತಮ್ಯ ಮಾಡುತ್ತಿರುವುದನ್ನು ತೀವ್ರವಾಗಿ ಖಂಡಿಸುತ್ತೇವೆ. ಜಿಲ್ಲಾಡಳಿತ ಆಚರಿಸುವ ಶ್ರೀಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಬಹಿಷ್ಕಾರ ಮಾಡಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು, ಅಲ್ಲದೆ ಸಮುದಾಯದ ವತಿಯಿಂದ ಅದ್ದೂರಿ ವಾಲ್ಮೀಕಿ ಜಯಂತಿ ಆಚರಣೆ ಮಾಡಲಾಗುವುದು ಎಂದರು.

ಸಭೆಯಲ್ಲಿ ಮುಖಂಡರಾದ ಕೆಲ್ಲಂಬಳ್ಳಿ ಸೋಮನಾಯಕ, ನಗರಸಭಾ ಅಧ್ಯಕ್ಷ ಎಸ್.ಸುರೇಶ್, ಮುಖಂಡರಾದ ಸುರೇಶ್ ನಾಯಕ, ವಿರಾಟ್ ಶಿವು, ಚೆಂಗುಮಣಿ, ಜಯಸುಂದರ್, ರಾಜುನಾಯಕ, ಕಂದಹಳ್ಳಿ ಮಹೇಶ್, ಪಾಳ್ಯ ಜಗದೀಶ್, ಹನೂರು ಪುಟ್ಟವೀರನಾಯಕ, ಸುರೇಶ್ ನಾಗ್, ಉಮಾಶಂಕರ್, ಭೀಮಪ್ಪನಾಯಕ,ಮೂರ್ತಿ ಹಾಗೂ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net