ವಿವಿಧ ಯೋಜನೆಗಳಿಗೆ ಅರ್ಜಿ

Application
Published on

ಚಾಮರಾಜನಗರ: ಡಾ.ಬಾಬು ಜಗಜೀವನ ರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ವತಿಯಿಂದ ಪರಿಶಿಷ್ಟ ಜಾತಿ ಆದಿಕರ್ನಾಟಕ, ಆದಿಮಾದಿಗ, ಚಮ್ಮಾರ, ಡೋರ, ಸಮಗಾರ, ಮೋಚಿ ಜನಾಂಗದವರಿಗೆ 2024-25ನೇ ಸಾಲಿನ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ಕೌಶಲ ಉನ್ನತೀಕರಣ ಯೋಜನೆ, ಸ್ವಾವಲಂಬಿ, ಸಂಚಾರಿ ಮಾರಾಟ ಮಳಿಗೆ, ಮಹಿಳಾ ಕುಶಲಕರ್ಮಿಗಳಿಗೆ ಕಾಯಕ ಸ್ಫೂರ್ತಿ ಯೋಜನೆ, ಚರ್ಮ ಶಿಲ್ಪಿ ಯೋಜನೆ, ಪಾದುಕೆ ಕುಟೀರ ಯೋಜನೆ, ಮಾರುಕಟ್ಟೆ ಸಹಾಯ ಯೋಜನೆ ಮತ್ತು ವಸತಿ ಯೋಜನೆಗೆ ಅರ್ಹ ಚರ್ಮ ಕುಶಲಕರ್ಮಿಗಳು ಅ.30ರೊಳಗೆ ಸೇವಾಸಿಂಧು ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಮೊ.ಸಂ: 9741833307 ಸಂಪರ್ಕಿಸುವಂತೆ ನಿಗಮದ ಜಿಲ್ಲಾ ಸಂಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net