ಶಾಸಕರಿಂದ ದಸರಾ ದೀಪಾಲಂಕಾರ ವೀಕ್ಷಣೆ

03rajesh3
Published on

ಚಾಮರಾಜನಗರ: ದಸರಾ ಮಹೋತ್ಸವದ ಅಂಗವಾಗಿ ಅ.7, 8 ಮತ್ತು 9ರಂದು ನಗರದ ಪ್ರಮುಖ ಬೀದಿಗಳಲ್ಲಿ ಅಳವಡಿಸುತ್ತಿರುವ ದೀಪಾಲಂಕಾರವನ್ನು ಎಂಎಸ್‌ಐಎಲ್ ಅಧ್ಯಕ್ಷ ಮತ್ತು ಶಾಸಕ ಸಿ.ಪುಟ್ಟರಂಗಶೆಟ್ಟಿ ಬುಧವಾರ ವೀಕ್ಷಿಸಿದರು.

ನಗರದ ಶ್ರೀಚಾಮರಾಜೇಶ್ವರಸ್ವಾಮಿ ದೇವಾಲಯದ ಆವರಣ, ತ್ಯಾಗರಾಜರಸ್ತೆ, ಬಿ.ರಾಚಯ್ಯ ಜೋಡಿರಸ್ತೆ, ಜಿಲ್ಲಾಡಳಿತ ಭವನದ ಆವರಣ ಹಾಗೂ ರಾಜ್ಯಸರ್ಕಾರದ 5 ಗ್ಯಾರಂಟಿ ಯೋಜನೆಗಳ ನಾಮಲಕಕ್ಕೆ ದೀಪಗಳ ಅಳವಡಿಕೆ ಸೇರಿದಂತೆ ದಸರಾ ಸಿದ್ದತೆಗಳನ್ನು ಪರಿಶೀಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಚಾಮರಾಜನಗರದಲ್ಲಿ ಈ ಬಾರಿ ಅದ್ದೂರಿ ದಸರಾಮಹೋತ್ಸವ ಆಚರಣೆ ಮಾಡಲಾಗುತ್ತಿದೆ. ನಗರದ ವಿವಿಧೆಡೆ ದೀಪಾಲಂಕಾರ ಆಕರ್ಷಣಿಯವಾಗಿ ಕಾಣುವಂತಿರಬೇಕು. ಕೆಟ್ಟಿರುವ ಬೀದಿದೀಪಗಳನ್ನು ದುರಸ್ತಿಪಡಿಸಬೇಕು, ನಗರದ ಸ್ವಚ್ಛತೆಗೆ ಮೊದಲು ಆಧ್ಯತೆ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಈ ವೇಳೆ ಮುಖಂಡರಾದ ಪಿ.ಕುಮಾರನಾಯಕ, ಕಾಗಲವಾಡಿಚಂದ್ರು, ರವಿಗೌಡ, ಬಸವನಪುರ ರಾಜಶೇಖರ್, ಬಸಪ್ಪನಪಾಳ್ಯ ನಟರಾಜು, ರಾಜಶೇಖರ್, ಗಣೇಶ್, ಸೆಸ್ಕ್ ಅಧಿಕಾರಿಗಳು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net