ಗಮನಸೆಳೆದ ಒಲೆ ರಹಿತ ಅಡುಗೆ ಸ್ಪರ್ಧೆ

05rajesh10
Published on

ಚಾಮರಾಜನಗರ: ಮಹಿಳಾ ದಸರಾ ಅಂಗವಾಗಿ ಆಯೋಜಿಸಿದ್ದ ಒಲೆ ರಹಿತ ಅಡುಗೆ ಸ್ಪರ್ಧೆಯಲ್ಲಿ ಮಹಿಳೆಯರು ತಯಾರಿಸಿದ ವಿವಿಧ ಖಾದ್ಯಗಳು ಗಮನಸೆಳೆಯಿತು.

ಕರಿನಂಜನಪುರ ಬಡಾವಣೆಯ ಶಾರದಾ ಅವರ ತಯಾರಿಸಿದ್ದ ಸ್ವೀಟ್‌ಕಾರ್ನ್ ಸಲಾಡ್. ಗಾಳಿಪುರ ಶಾಯಿದಬಾನು ಮತ್ತು ಮೌಸಿಮಾ ಪಾತೀಮಾ ಆರೋಗ್ಯಕ್ಕೆ ಸಹಕಾರಿಯಾದ ಪಂಜೇರಿ, ಮಕ್ಹಾನ ಲಡ್ಡು ಅತ್ಯಂತ ರುಚಿಕರವಾಗಿತ್ತು. ಬೀಬಿ ಸಬೀನಾ ಕ್ಷಣಮಾತ್ರದಲ್ಲಿ ತಯಾರಿಸಿದ ಫ್ರೂಟ್ ಸಲಾಡ್, ಸರಸ್ವತಿ ಅವರು ತಯಾರಿಸಿದ್ದ ಕ್ಯಾರೆಟ್ ಲಡ್ಡು, ಮಸಾಲ ನಿಪ್ಪಿಟ್ಟು, ಶೋಭಾ ಅವರು ತಯಾರಿಸಿದ್ದ ಡ್ರೈ ಫ್ರೂಟ್ಸ್ ಲಡ್ಡು, ಮೊಳಕೆ ಕಾಳು ಚಾಟ್ಸ್ ಹಾಗೂ ಇನ್ನಿತರೆ ಮಹಿಳೆಯರು ನೀರು ಮಜ್ಜಿಗೆ, ಹೆಸರು ಬೇಳೆ, ಬೆಲ್ಲದ ಪಾನಕ, ಕೋಸಂಬರಿ, ಚನ್ನಾ ಮಸಾಲ, ಮೊಳಕೆ ಕಾಳು ನೆರೆದವರ ಬಾಯಿಯಲ್ಲಿ ನೀರೂರಿಸುವಂತೆ ಮಾಡಿತು.

ಸ್ಪರ್ಧೆಯಲ್ಲಿ ಕರಿನಂಜನಪುರ ಶಾರದಾ ಪ್ರಥಮ, ಶಾಯಿದಬಾನು ಮತ್ತು ಮೌಸಿಮಾ ದ್ವೀತಿಯ, ಸರಸ್ವತಿ ತೃತೀಯ ಹಾಗೂ ವಸಂತ ಅಂಬಳೆ, ಶೋಭಾ, ವಿಜಯಲಕ್ಷ್ಮೀ, ನೀಲಮ್ಮ, ಬೀಬಿ ಸಬೀನಾ ಸಮಾಧಾನಕರ ಬಹುಮಾನ ಪಡೆದುಕೊಂಡರು. ತೀರ್ಪುಗಾರರಾಗಿ ಶಿಕ್ಷಕಿಯರಾದ ಸುಮನಾ ಕುಮಾರಿ, ಬಿ.ಸವಿತಾ, ಆಯಿಷಾ ಖಾನಂ, ಗಾಯಿತ್ರಿ, ಶಾಮ ಸುಂದರಿ, ಶಾರದಾ ಭಾಗವಹಿಸಿದ್ದರು.

ಈ ಬಾರಿಯ ಮಹಿಳಾ ದಸರಾದಲ್ಲಿ ವಿಶೇಷವಾಗಿ ಹಲವಾರು ಕ್ರೀಡಾಕೂಟಗಳನ್ನು ಆಯೋಜಿಸಿರುವುದು ತುಂಬಾ ಖುಷಿ ನೀಡಿದೆ. ಅದರಲ್ಲೂ ಅಂಗನವಾಡಿ ಕಾರ್ಯಕರ್ತರಿಗೆ ವಿಶೇಷ ಅವಕಾಶ ನೀಡಿರುವುದಕ್ಕೆ ಜಿಲ್ಲಾಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸುತ್ತೇವೆ.-ಶಾಯಿದಾ ಬಾನು, ಅಂಗನವಾಡಿ ಕಾರ್ಯಕರ್ತೆ, ಗಾಳೀಪುರ, ಚಾಮರಾಜನಗರ ನಾನು ಒಲೆ ರಹಿತ ಅಡುಗೆ ಸ್ಪರ್ಧೆಯಲ್ಲಿ ಭಾಗವಹಿಸಿದೆ. ನನ್ನ ಗೆಳತಿಯರು ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಿದ್ದರು. ಮಹಿಳೆಯರ ಒತ್ತಡದ ಬದುಕಿನಲ್ಲಿ ಇಂತಹ ಕಾರ್ಯಕ್ರಮಗಳು ಖುಷಿಯನ್ನು ನೀಡುತ್ತದೆ. ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ದಸರಾ ಸಂಭ್ರಮದಲ್ಲಿ ಭಾಗಿಯಾಗೋಣ.-ನೀಲಮ್ಮ, ಅಂಗನವಾಡಿ ಕಾರ್ಯಕರ್ತೆ, ಚಾಮರಾಜನಗರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net