

ಚಾಮರಾಜನಗರ: ತಾಲೂಕಿನ ತೆಂಗು ಬೆಳೆಗಾರರ ಸಂಸ್ಕರಣ ಮತ್ತು ಮಾರಾಟ ಸಹಕಾರ ಸಂಘದ ನೂತನ ನಿರ್ದೇಶಕರಾಗಿ ಜಿಲ್ಲಾ ರೈತ ಸಂಘದ ಅಧ್ಯಕ್ಷ ಹೆಬ್ಬಸೂರು ಬಸವಣ್ಣ ಆಯ್ಕೆಯಾದರು.
ಸಂಘದ ಅಧ್ಯಕ್ಷರಾಗಿದ್ದ ಆಲೂರು ಚನ್ನಬಸಪ್ಪ ಅವರ ನಿಧನದಿಂದ ತೆರವಾಗಿದ್ದ ನಿರ್ದೇಶಕ ಸ್ಥಾನಕ್ಕೆ ಇಂದು ಚುನಾವಣೆ ಘೋಷಣೆಯಾಗಿತ್ತು. ನಿರ್ದೇಶಕ ಸ್ಥಾನಕ್ಕೆ ಹೆಬ್ಬಸೂರು ಬಸವಣ್ಣ, ಹಾಗೂ ಹೊಮ್ಮ ಸ್ವಾಮಿ ನಾಮಪತ್ರ ಸಲ್ಲಿಸಿದ್ದರು. ಬಳಿಕ ನಗರದ ಟಿಎಪಿಎಂಎಸ್ ಕಚೇರಿಯಲ್ಲಿ ಇಂದು ಚುನಾವಣೆ ಮತದಾನ ನಡೆಯಿತು. ಬಳಿಕ ಮತ ಏಣಿಕೆ ನಡೆದು ಹೆಬ್ಬಸೂರು ಬಸವಣ್ಣ 115 ಮತಗಳನ್ನು ಪಡೆದು ನಿರ್ದೇಶಕರಾಗಿ ಆಯ್ಕೆಯಾದರೆ, ಹೊಮ್ಮದ ಸ್ವಾಮಿ 79 ಮತಗಳನ್ನು ಪಡೆದು, 35 ಮತಗಳ ಅಂತರದಲ್ಲಿ ಸೋಲು ಕಂಡರು. ಚುನಾವಣಾಧಿಕಾರಿಯಾಗಿದ್ದ ಹೇಮಂತಕುಮಾರ್ ಅವರು ಅಧಿಕೃತವಾಗಿ ಬಸವಣ್ಣ ಅವರ ಹೆಸರನ್ನು ಘೋಷಣೆ ಮಾಡಿದರು.
ಎಂಡಿಎನ್ ಪುತ್ಥಳಿ ಮಾಲಾರ್ಪಣೆ : ನಂತರ ತೆಂಗು ಸಂಸ್ಕರಣಾ ಘಟಕದಲ್ಲಿರುವ ರೈತ ನಾಯಕ ಪ್ರೊ: ಎಂ.ಡಿ. ನಂಜುಂಡಸ್ವಾಮಿಯವರ ಪುತ್ಥಳಿಗೆ ನೂತನ ನಿರ್ದೇಶಕ ಹೆಬ್ಬಸೂರು ಬಸವಣ್ಣ ಮಾಲಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಿದರು. ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಎ.ಎಂ.ಮಹೇಶ್ ಪ್ರಭು, ಹೆಚ್.ಸಿ. ಮಹೇಶ್ ಕುಮಾರ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ. ಸಿದ್ದರಾಜು, ಮುಖಂಡರಾದ ಎಚ್.ಎಸ್.ರಮೇಶ, ಹೊಸೂರು ಶಿವಾನಂದ್ ಮಹಾದೇವಸ್ವಾಮಿ, ಮಾದೇವ ಪ್ರಸಾದ್, ನಿರ್ದೇಶಕರಾದ ಸೋಮಶೇಖರ್, ಎಸ್. ಬಸವರಾಜು ,ಪಾರ್ವತಮ್ಮ ಜಯಣ್ಣ ಮಾದೇವಸ್ವಾಮಿ ಮಹೇಶ್ ಚಿನ್ನಸ್ವಾಮಿ ಎ.ವಿ. ನಾಗರಾಜಸ್ವಾಮಿ, ಎ.ಎಲ್, ಸಂತೋಷ್ ಹೊನ್ನೇಗೌಡಹುಂಡಿ ಸಿದ್ದರಾಜು, ಸುಂದರಮೂರ್ತಿ ಲಕ್ಷ್ಮಣ, ರಾಜೇಶ್, ನಾಗೇಂದ್ರ ಸ್ವಾಮಿ ಇದ್ದರು.