

ಚಾಮರಾಜನಗರ: ತಾಲೂಕಿನ ಹರವೆ ಗ್ರಾಮದ ಆದಿಜಾಂಬವ ಸಮುದಾಯದ ಬೀದಿಯಲ್ಲಿ 2ಲಕ್ಷ ರೂ.ವೆಚ್ಚದ ನೂತನ ಆರ್ಚ್ ಅಭಿವೃದ್ಧಿ ಕಾಮಗಾರಿಗೆ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೆ.ನವೀನ್ ಗುರುವಾರ ಗುದ್ದಲಿಪೂಜೆ ನೆರವೇರಿಸಿದರು.
ಬಳಿಕ ಮಾತನಾಡಿದ ಅವರು, ಬಡಾವಣೆಗೆ ಪ್ರವೇಶಿಸುವ ಕಡೆ ನೂತನ ಆರ್ಚ್ ನಿರ್ಮಾಣ ಕಾಮಗಾರಿಗೆ ಕ್ಷೇತ್ರದ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ವೈಯಕ್ತಿಕವಾಗಿ 2ಲಕ್ಷ ರೂ.ಧನಸಹಾಯ ಮಾಡಿದ್ದಾರೆ. ಹಣವನ್ನು ಸಮರ್ಪಕವಾಗಿ ಬಳಕೆಮಾಡಿಕೊಂಡು, ಗುಣಮಟ್ಟದ ಆರ್ಚ್ ನಿರ್ಮಿಸಿಕೊಳ್ಳಬೇಕು ಎಂದರು.
ಸಮುದಾಯದವರು ವಾಸಮಾಡುವ ಬೀದಿಗಳಿಗೆ ಸಿಸಿ ರಸ್ತೆ ನಿರ್ಮಿಸಲು ಎಸ್ಸಿಎಸ್ಟಿ ಯೋಜನೆಯಡಿ 50ಲಕ್ಷ ರೂ. ಮಂಜೂರಾಗಿದ್ದು, ಕೆಲವೇ ದಿನಗಳಲ್ಲಿ ಸಿಸಿರಸ್ತೆ ಕಾಮಗಾರಿಗೆ ಶಾಸಕರು ಗುದ್ದಲಿಪೂಜೆ ನೆರವೇರಿಸಲಿದ್ದಾರೆ. ಬಾಬುಜಗಜೀವನ್ ರಾಂ ಸಮುದಾಯ ಭವನ ನಿರ್ಮಾಣವಾಗಿ ಈವರಗೆ ಉದ್ಘಾಟನೆಯಾಗಿಲ್ಲ. ಅದರ ಉದ್ಘಾಟನೆಗೆ ಸಂಬಂಧಿಸಿದಂತೆ ಸಮುದಾಯದವರು ಶಾಸಕರ ಗಮನಸೆಳೆಯಬೇಕು. ಸಣ್ಣಪುಟ್ಟ ಕೆಲಸಗಳಿರಬಹುದು, ಈ ವಿಚಾರವನ್ನು ಅವರ ಗಮನಕ್ಕೆ ತಂದರೆ ಭವನದ ಉಳಿಕೆ ಕೆಲಸಗಳನ್ನು ಮಾಡಿಸುವತ್ತ ಗಮನಹರಿಸುತ್ತಾರೆ ಎಂದು ಹೇಳಿದರು.
ಈ ವೇಳೆ ನಿವೃತ್ತ ಶಿಕ್ಷಕ ಎಚ್.ಸಿ.ಮಾದಪ್ಪ, ಅರ್ಚಕ ಮಹದೇವಸ್ವಾಮಿ, ತಾ.ಪಂ ಮಾಜಿಸದಸ್ಯ ಬಿ.ಉದಯಕುಮಾರ್, ಗ್ರಾ.ಪಂ ಮಾಜಿ ಸದಸ್ಯ ಎಚ್.ಎಂ.ನಾಗೇಶ್, ಮುಖಂಡರಾದ ಜಿ.ರೇವಪ್ಪ, ನಂಜುಂಡಸ್ವಾ,ಮಿ, ನಿವೃತ್ತ ಹಾಲುಪರೀಕ್ಷಕ ನಾಗರಾಜಪ್ಪ, ದೇವಯ್ಯ ಹಾಗೂ ಇತರರು ಭಾಗವಹಿಸಿದ್ದರು.