ಕೃಷಿಯಲ್ಲಿ ಉಪಕಸುಬು ಮುಖ್ಯ

29rajesh5
Published on

ಚಾಮರಾಜನಗರ: ರೇಷ್ಮೆನಾಡಾಗಿದ್ದ ಚಾಮರಾಜನಗರದಲ್ಲಿ ರೇಷ್ಮೆ ಕೃಷಿಗೆ ಹೆಚ್ಚಿನ ಉತ್ತೇಜನ ನೀಡೋಣ ಎಂದು ಕೃಷಿ ವಿಜ್ಞಾನ ಕೇಂದ್ರದ ರೇಷ್ಮೆ ವಿಭಾಗದ ವಿಜ್ಞಾನಿ ಡಾ.ಚಂದ್ರಶೇಖರ್ ಕಳ್ಳಿಮನಿ ತಿಳಿಸಿದರು.

ಗುಂಡ್ಲುಪೇಟೆ ತಾಲೂಕಿನ ಕಬ್ಬಳ್ಳಿ ಗ್ರಾಮದಲ್ಲಿ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ ಮತ್ತು ಚಾಮರಾಜನಗರ ಕೃಷಿ ಮಹಾವಿದ್ಯಾಲಯದ ಸಹಯೋಗದಲ್ಲಿ ಅಂತಿಮ ವರ್ಷದ ಬಿಎಸ್ಸಿ ವಿದ್ಯಾರ್ಥಿಗಳಿಗಾಗಿ ಶುಕ್ರವಾರ ಹಮ್ಮಿಕೊಂಡಿದ್ದ ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರದಲ್ಲಿ ಮಾತನಾಡಿದರು.

ರೈತರ ಆದಾಯ ದ್ವಿಗುಣಗೊಳಿಸಲು ರೇಷ್ಮೆ ಕೃಷಿ ಅಗತ್ಯವಾಗಿದೆ. ರೇಷ್ಮೆಯಿಂದ ದೊರೆಯುವ ಉತ್ಪನ್ನಗಳಿಗೆ ಹೆಚ್ಚಿನ ಬೇಡಿಕೆ ಇದೆ. ಜೇನು ಸಾಕಾಣಿಕೆಯಿಂದ ಪರಿಶುದ್ಧವಾದ ಜೇನುತುಪ್ಪವನ್ನು ಮನೆಯ ಬಳಕೆಗೆ ಹಾಗೂ ಉದ್ಯೋಗವಾಗಿಸಿಕೊಳ್ಳಬಹುದು ಎಂದರು.

ರೇಷ್ಮೆ ಕೃಷಿ ವಿಚಾರ ಸಂಕೀರ್ಣವನ್ನು ವಿದ್ಯಾರ್ಥಿ ಅಂಕಿತ್ ಹಾಗೂ ಜೇನು ಕೃಷಿ ವಿಚಾರ ಸಂಕೀರ್ಣವನ್ನು ವಿದ್ಯಾರ್ಥಿ ನಾಗಶ್ರೀ ತಿಳಿಸಿಕೊಟ್ಟರು. ಕೃಷಿ ಮಹಾವಿದ್ಯಾಲಯದ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಮತ್ತು ಕಬ್ಬಹಳ್ಳಿಯ ರೈತರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net