ಬಿಜೆಪಿಯವರಿಗೆ ಸಿಬಿಐ ಮೇಲೆ ಈಗ ನಂಬಿಕೆ ಬಂದಿದೆ

Published on

ಚಾಮರಾಜನಗರ: ಬಿಜೆಪಿಯವರಿಗೆ ಈ ಹಿಂದೆ ಸಿಬಿಐ ಮೇಲೆ ನಂಬಿಕೆ ಇರಲಿಲ್ಲ. ಆದರೇ ಈಗ ಪ್ರತಿಯೊಂದಕ್ಕೂ ಸಿಬಿಐಯನ್ನು ಎಳೆಯುತ್ತಿದ್ದಾರೆ ಎಂದು ಕೃಷಿ ಮಾರಾಟ ಮತ್ತು ಸಕ್ಕರೆ ಸಚಿವ ಶಿವಾನಂದ್ ಹೇಳಿದರು.

ತಾಲೂಕಿನ ಮಣಚನಹಳ್ಳಿ ಸಮೀಪದಲ್ಲಿರುವ ತೆಂಗು ಬೆಳೆಗಾರರ ಸಂಸ್ಕರಣ ಘಟಕದಲ್ಲಿ ಭಾನುವಾರ ಆಯೋಜಿಸಿದ್ದ ವಿಶ್ವ ತೆಂಗು ಬೆಳೆಗಾರರ ದಿನಾಚರಣೆಯಲ್ಲಿ ಭಾಗವಹಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು.

ಪ್ರತಿಯೊಂದಕ್ಕೂ ಬಿಜೆಪಿಯವರು ಸಿಬಿಐಯನ್ನು ಎಳೆಯುತ್ತಿದ್ದಾರೆ. ಆದರೇ ಈ ಹಿಂದೆ ಬಿಜೆಪಿಯವರಿಗೇ ಸಿಬಿಐ ಮೇಲೆ ನಂಬಿಕೆ ಇರಲಿಲ್ಲ. ನ್ಯಾಯಾಲಯ ಮುಡಾ ಪ್ರಕರಣವನ್ನು ಸಿಬಿಐಗೆ ವಹಿಸಿ ಎಂದು ಹೇಳಿಲ್ಲ. ಆಗಿದ್ದರೇ ನ್ಯಾಯಾಲಯವೇ ಸಿಬಿಐಗೆ ವಹಿಸಬಹುದಿತ್ತು. ಅದನ್ನು ಬಿಜೆಪಿ, ಜೆಡಿಎಸ್ ಅವರು ಹೇಳಿದರೇ ಆಗುತ್ತದೆಯೇ. ನ್ಯಾಯಾಲಯದ ಆದೇಶದಂತೆ ತನಿಖೆ ನಡೆಯುತ್ತಿದೆ ಎಂದು ಹೇಳಿದರು.

ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡುವವರೆಗೂ, ಅವರು ಹೋಗಿ ಬಂದಲ್ಲಿ ಕಪ್ಪುಬಾವುಟ ಪ್ರದರ್ಶನ ಮಾಡುತ್ತೇವೆ ಎಂಬ ಮಾಜಿ ಸಚಿವ ಸಿ.ಟಿ.ರವಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ, ನಮ್ಮದು ಸರ್ಕಾರ ನಡೆಸುವ ಕೆಲಸವಿದೆ, ಅದನ್ನು ನಾವು ಮಾಡುತ್ತೇವೆ. ವಿರೋಧ ಪಕ್ಷದವರು ಅವರ ಕೆಲಸ ಮಾಡುತ್ತಿದ್ದಾರೆ. ಇಡೀ 5 ವರ್ಷವೂ ಕಪ್ಪು ಬಾವುಟ ಪ್ರದರ್ಶನ ಮಾಡುವುದೇ ಆದರೇ ಅದನ್ನೇ ಮಾಡಲಿ ಎಂದು ತಿರುಗೇಟು ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net