ಚಾಮರಾಜನಗರ: ಗುಂಡ್ಲುಪೇಟೆ ಪಟ್ಟಣದಲ್ಲಿ ಹಿಂದು ಜಾಗರಣ ವೇದಿಕೆ ವತಿಯಿಂದ ಭಾನುವಾರ ಕಾರ್ಯಕರ್ತರ ಸಭೆ ನಡೆಯಿತು.
ಸಭೆಯಲ್ಲಿ ಜಾಗರಣ ವೇದಿಕೆ ಪ್ರಾಂತ ಸಂಘಟನಾ ಕಾರ್ಯದರ್ಶಿ ಪ್ರಶಾಂತ್ ಸಮ್ಮುಖದಲ್ಲಿ ತಾಲೂಕಿನ ಸಂಚಾಲಕರಾಗಿ ಚಂದ್ರು ಶಿಂಡನಪುರ, ಸಹ ಸಂಚಾಲಕರಾಗಿ ಚನ್ನಪ್ಪ ಅವರನ್ನು ನೇಮಕ ಮಾಡಲಾಯಿತು. ಜಿಲ್ಲಾ ಸಂಚಾಲಕ ಗುಂಡ್ಲುಪೇಟೆ ನಂದೀಶ್ ಇದ್ದರು.