ಚಾಮರಾಜನಗರ: ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ಅಲಿಂಕೋ ಸಂಸ್ಥೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕ ಸಬಲೀಕರಣ ಇಲಾಖೆ ಸಹಯೋಗದಲ್ಲಿ ಅಂಗವಿಕಲರು ಮತ್ತು ಹಿರಿಯ ನಾಗರಿಕ ಫಲಾನುಭವಿಗಳಿಗೆ ಆರ್.ವಿ.ವೈ, ಎ.ಡಿ.ಐ.ಪಿ ಯೋಜನೆಯಡಿ ಉಚಿತ ಸಾಧನ ಸಲಕರಣೆಗಳ ವಿತರಣೆ ಕಾರ್ಯಕ್ರಮವನ್ನು ಲೋಕಸಭಾ ಸದಸ್ಯ ಸುನೀಲ್ ಬೋಸ್ ನೇತೃತ್ವದಲ್ಲಿ ಅ.1 ರಂದು ಬೆಳಿಗ್ಗೆ 10 ಗಂಟೆಗೆ ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕ ಸಬಲೀಕರಣ ಇಲಾಖೆ ದೂ.ಸಂ 08226-223988, ಚಾಮರಾಜನಗರ ಎಂ.ಆರ್.ಡಬ್ಲುೃ ರಾಜೇಶ್ ಮೊ.ಸಂ 8073716208, ಕೊಳ್ಳೇಗಾಲ, ಹನೂರು ಎಂ.ಆರ್.ಡಬ್ಲುೃ ಕವಿರತ್ನ ಮೊ.ಸಂ 7892715408, ಗುಂಡ್ಲುಪೇಟೆ ಎಂ.ಆರ್.ಡಬ್ಲ್ಯೂ ಮಂಜುಳ ಮೊ.ಸಂ 974223332, ಯಳಂದೂರು ಎಂ.ಆರ್.ಡಬ್ಲ್ಯೂ ಮಹದೇವಮ್ಮ ಮೊ.ಸಂ 9740164149 ಸಂಪರ್ಕಿಸುವಂತೆ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.