ಚಾಮರಾಜನಗರ: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮುಡಾ ನಿವೇಶನ ಹಂಚಿಕೆ ಪ್ರಕರಣದ ದೂರುದಾರ ಸ್ನೇಹಮಯಿ ಕೃಷ್ಣ ವಿರುದ್ಧ ಚಾಮರಾಜನಗರ ಜೆಎಂಎ್ಸಿ ನ್ಯಾಯಾಲಯದಲ್ಲಿ ವಂಚನೆ ಪ್ರಕರಣ ದಾಖಲಾಗಿದ್ದು, ಶುಕ್ರವಾರ ವಿಚಾರಣೆಗೆ ಹಾಜರಾಗಿದ್ದರು.
ನಗರದ ಜಿಲ್ಲಾ ನ್ಯಾಯಾಲಯದಲ್ಲಿ ವಿಚಾರಣೆಗೆ ಹಾಜರಾದ ಬಳಿಕ ಸ್ನೇಹಮಯಿ ಕೃಷ್ಣ ಮಾತನಾಡಿ, ನಾನು ಕರುಣಾಕರ್ ಎಂಬುವವರಿಂದ 50 ಸಾವಿರ ರೂ. ಸಾಲವನ್ನಷ್ಟೇ ಪಡೆದುಕೊಂಡಿದ್ದೆ. ಆದರೆ 3 ಲಕ್ಷ ರೂ. ಸಾಲ ಪಡೆದಿರುವುದಾಗಿ ಪ್ರಾಮಿಸರಿ ನೋಟ್ ಬರೆಸಿಕೊಂಡಿದ್ದಾರೆ. ಈ ಸಂಬಂಧ ನನ್ನ ಮೇಲೆ ಸುಳ್ಳು ಪ್ರಕರಣ ದಾಖಲಿಸಲಾಗಿದೆ. ನ್ಯಾಯಾಧೀಶರ ಮುಂದೆ ಹೇಳಿಕೆ ದಾಖಲಿಸಿದ್ದೇನೆ. ಶೀಘ್ರ ಸತ್ಯಾಂಶ ಹೊರಬೀಳಲಿದೆ ಎಂದರು.
ದೂರುದಾರ ಕರುಣಾಕರ್ ಮಾತನಾಡಿ, 2018, 2019 ಹಾಗೂ 2020 ರಲ್ಲಿ ತಲಾ 3 ಲಕ್ಷ ರೂ. ಹಣವನ್ನು ಸ್ನೇಹಮಯಿ ಕೃಷ್ಣ ಅವರಿಗೆ ಸಾಲ ನೀಡಿದ್ದೇನೆ. ಸಾಲ ಹಿಂತಿರುಗಿಸದೆ ವಂಚನೆ ಎಸಗಿದ್ದರಿಂದ ಪ್ರಕರಣ ದಾಖಲಿಸಲಾಗಿದೆ. ಮೂರು ವರ್ಷಗಳಿಂದ ವಿಚಾರಣೆ ನಡೆಯುತ್ತಿದೆ. ಮೊದಲು ಸ್ವಲ್ಪ ಸಾಲ ಪಡೆದು ಬಡ್ಡಿ ಸಮೇತ ತೀರಿಸಿ ವಿಶ್ವಾಸಗಳಿಸಿದ್ದ ಕೃಷ್ಣ, ಪರವಾನಗಿ ಇಲ್ಲದೇ ೈನಾನ್ಸ್ ಮಾಡುತ್ತಿರುವುದಾಗಿ ನನ್ನ ವಿರುದ್ಧವೇ ದೂರು ನೀಡಿದ್ದಾರೆ ಎಂದು ಆರೋಪಿಸಿದರು.