

ಚಾಮರಾಜನಗರ: ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ವತಿಯಿಂದ ಎಂಎಸ್‌ಎಂಇ ಅಭಿವೃದ್ಧಿ ಕಾಯ್ದೆ 2006 ರನ್ವಯ ಉತ್ಪಾದನೆ, ಸೇವಾ ಚಟುವಟಿಕೆಗಳಲ್ಲಿ ತೊಡಗಿರುವ ಘಟಕಗಳಿಂದ ಉತ್ಪನ್ನ, ಸೇವೆಗಳನ್ನು ಪಡೆದು ಅಸಲು ಮೊತ್ತವನ್ನು ಪಾವತಿಸದೆ ಇರುವ ಖರೀದಿದಾರ ಘಟಕಗಳು ಬಡ್ಡಿ ಸಮೇತ ಮೊತ್ತವನ್ನು ಹಿಂಪಡೆಯಲು ಅನುಕೂಲವಾಗುವಂತೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತ ಸರಬರಾಜುದಾರರು ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಕೈಗಾರಿಕಾ ಕೇಂದ್ರ ದೂ.08226-224915 ಸಂಪರ್ಕಿಸುವಂತೆ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.