ಸುಂಕ ನಿರ್ಧರಣಾದೇಶ ಪಡೆಯುವುದು ಕಡ್ಡಾಯ

18CHN4 JILLADALITHA BAVAN
Published on

ಚಾಮರಾಜನಗರ: ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಸುಂಕ ಕಾಯ್ದೆ 1996, ಕೇಂದ್ರದ ನಿಯಮಗಳು 1998 ಜಾರಿಯಲ್ಲಿದ್ದು ಕಾಯ್ದೆಯ ಅನುಸಾರ ಕಟ್ಟಡ ಕಾಮಗಾರಿ ಆರಂಭವಾದ 30 ದಿನಗಳೊಳಗೆ ಕಾಯ್ದೆಯಡಿ ಸುಂಕ ನಿರ್ಧರಣಾಧಿಕಾರಿಯಾಗಿರುವ ಜಿಲ್ಲಾ ಕಾರ್ಮಿಕ ಅಧಿಕಾರಿಗೆ ನಮೂನೆ-1 ರಲ್ಲಿ ವಿವರವನ್ನು ಸಲ್ಲಿಸುವುದು ಕಡ್ಡಾಯವಾಗಿದೆ ಎಂದು ಕಾರ್ಮಿಕ ಇಲಾಖೆ ತಿಳಿಸಿದೆ.

ಕಾಯ್ದೆಯಡಿಯಲ್ಲಿ ಸುಂಕ ನಿರ್ಧರಣಾಧಿಕಾರಿಗಳಾಗಿ ಜಿಲ್ಲಾ ಕಾರ್ಮಿಕ ಅಧಿಕಾರಿಗಳನ್ನು ನೇಮಿಸಲಾಗಿದೆ. ಕಟ್ಟಡ ಕಾಮಗಾರಿ ಆರಂಭವಾದ ದಿನಾಂಕದಿಂದ ಕಟ್ಟಡ ಕಾಮಗಾರಿ ಮುಕ್ತಾಯವಾದ ದಿನಾಂಕದವರೆಗಿನ ಒಟ್ಟು ಕಟ್ಟಡ ನಿರ್ಮಾಣ ವೆಚ್ಚದ ವಿವರವನ್ನು ಕಾಮಗಾರಿ ಪೂರ್ಣಗೊಂಡ 30 ದಿನಗಳೊಳಗೆ ನಮೂನೆ-4ರಲ್ಲಿ ಸೂಕ್ತ ದಾಖಲಾತಿಗಳೊಂದಿಗೆ ಸುಂಕ ನಿರ್ಧರಣಾಧಿಕಾರಿಗಳಲ್ಲಿ ಸಲ್ಲಿಸಿ ಸುಂಕ ನಿರ್ಧರಣಾದೇಶ ಪಡೆದುಕೊಳ್ಳುವುದು ಕಡ್ಡಾಯವಾಗಿದೆ. ಚಾಮರಾಜನಗರ ಜಿಲ್ಲಾ ವ್ಯಾಪ್ತಿಯಲ್ಲಿ ಹಲವಾರು ಕಟ್ಟಡ ಕಾಮಗಾರಿಗಳು ಪೂರ್ಣಗೊಂಡಿದ್ದು, ಕಟ್ಟಡದ ಮಾಲೀಕರು ಕಾಯ್ದೆಯಡಿ ಸುಂಕ ನಿರ್ಧರಣೆಗಾಗಿ ವಿವರಗಳನ್ನು ಸಲ್ಲಿಸಿರುವುದಿಲ್ಲ. ಇದು ಕಾಯ್ದೆಯ ಉಲ್ಲಂಘನೆಯಾಗುತ್ತದೆ.

ಕಾಮಗಾರಿ ಮುಕ್ತಾಯಗೊಂಡ ಕಟ್ಟಡ ಕಾಮಗಾರಿಯ ಮಾಲೀಕರು ಕಟ್ಟಡ ನಿರ್ಮಾಣದ ಒಟ್ಟು ವೆಚ್ಚದ ವಿವರಗಳನ್ನು ಈ ಕೂಡಲೇ ಸಲ್ಲಿಸಿ ಸುಂಕ ನಿರ್ಧರಣಾದೇಶವನ್ನು ಪಡೆಯುವಂತೆ ಸುಂಕ ನಿರ್ಧರಣಾಧಿಕಾರಿಗಳು ಆಗಿರುವ ಜಿಲ್ಲಾ ಕಾರ್ಮಿಕ ಅಧಿಕಾರಿ ಎಂ. ಸವಿತಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net