ಇ-ಕೆವೈಸಿ ಮ್ಯಾಪಿಂಗ್ ಕಡ್ಡಾಯ

Published on

ಚಾಮರಾಜನಗರ: ಸರ್ಕಾರ ಜಾರಿಗೊಳಿಸಿರುವ ವೃದ್ಧಾಪ್ಯ, ಸಂಧ್ಯಾ ಸುರಕ್ಷಾ, ವಿಧವಾ, ಅಂಗವಿಕಲ, ಮೈತ್ರಿ, ಮನಸ್ವಿನಿ ವೇತನ ಮತ್ತು ರೈತರ ಪತ್ನಿ ವಿಧವಾ ವೇತನ ಹಾಗೂ ಸಾಮಾಜಿಕ ಭದ್ರತೆ ಯೋಜನೆಯಡಿ ಬಣವೆ ನಷ್ಟ, ಹಾವು ಕಡಿತ, ಆಕಸ್ಮಿಕ ಸಾವು ಪರಿಹಾರ ಪಡೆಯಲಿರುವ ಫಲಾನುಭವಿಗಳು ಐಪಿಪಿಬಿಗೆ ಇ-ಕೆವೈಸಿ ಹಾಗೂ ಎನ್‌ಪಿಸಿಐ ಮ್ಯಾಪಿಂಗ್ ಮಾಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಫಲಾನುಭವಿಗಳು ಅ.14 ರೊಳಗೆ ತಪ್ಪದೆ ಪಿಂಚಣಿ ಜಮೆಯಾಗುವ ಬ್ಯಾಂಕ್, ಅಂಚೆ ಕಚೇರಿ ಖಾತೆಗೆ ಇ-ಕೆ.ವೈ.ಸಿ, ಎನ್.ಪಿ.ಸಿ.ಐ ಮ್ಯಾಪಿಂಗ್ ಮಾಡಿಸಿಕೊಳ್ಳಬೇಕು. ಒಂದು ವೇಳೆ ವೃದ್ಧರು, ಅಂಗವಿಕಲರು, ಮಕ್ಕಳಿಗೆ ಆಧಾರ್ ಬಯೋಮೆಟ್ರಿಕ್ ಬಾರದೆ ಇದ್ದಲ್ಲಿ ಅಂಚೆ ಕಚೇರಿಯಲ್ಲಿ ಉಳಿತಾಯ ಖಾತೆಯನ್ನು ಹೊಸದಾಗಿ ತೆರೆದು ಆಧಾರ್ ಸಂಖ್ಯೆ ಮೂಲಕ ಎನ್.ಪಿ.ಸಿ.ಐ ಮ್ಯಾಪಿಂಗ್ ಮಾಡಿಸಿಕೊಳ್ಳಬೇಕು. ತಪ್ಪಿದಲ್ಲಿ ಸರ್ಕಾರದಿಂದ ಬರುವ ಪಿಂಚಣಿ ರದ್ದಾಗಲಿದೆ ಎಂದು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net