

ಚಾಮರಾಜನಗರ: ಹೊಸದಾಗಿ ಉಳಿತಾಯ ಖಾತೆ ತೆರೆಯದ ಪಡಿತರ ಚೀಟಿದಾರರಿಗೆ ಖಾತೆ ತೆರೆಯಲು ಅನುಕೂಲವಾಗಲು ಜಿಲ್ಲೆಯ ಎಲ್ಲಾ ತಾಲೂಕು ಕಚೇರಿಗಳಲ್ಲಿ ಅಂಚೆ ಕಚೇರಿಯ ಮೂಲಕ ಅಂಚೆ ಖಾತೆ ತೆರೆಯುವ ಕೇಂದ್ರವನ್ನು ಆರಂಭಿಸಲಾಗಿದೆ.
ಜು.19 ರಿಂದ 21ರವರೆಗೆ ಬೆಳಗ್ಗೆ 11 ರಿಂದ ಸಂಜೆ 5 ಗಂಟೆಯವರೆಗೆ ತಾಲೂಕು ಕಚೇರಿಗಳಲ್ಲಿ ಖಾತೆ ತೆರೆಯುವ ಉದ್ದೇಶಕ್ಕಾಗಿಯೇ ಶಿಬಿರ ತೆರೆಯಲಾಗಿದೆ. ಜಿಲ್ಲೆಯಲ್ಲಿ 24572 ಪಡಿತರ ಚೀಟಿದಾರರ ಬ್ಯಾಂಕ್ ಖಾತೆಗಳು ನಿಷ್ಕ್ರಿಯವಾಗಿದೆ. ಇದರಿಂದ ಅನ್ನಭಾಗ್ಯ ಯೋಜನೆಯ 5 ಕೆಜಿ ಅಕ್ಕಿಯ ಬದಲಾಗಿ ನೀಡುತ್ತಿರುವ ನಗದು ವರ್ಗಾವಣೆ ಮಾಡಲು ಸಾಧ್ಯವಾಗಿರುವುದಿಲ್ಲ. ಇಂತಹ ಪಡಿತರ ಚೀಟಿದಾರರು ತಾಲೂಕು ಕಚೇರಿಗಳಲ್ಲಿ ಇರುವ ಶಿಬಿರದಲ್ಲಿ ಅಂಚೆ ಖಾತೆ ತೆರೆಯುವ ಮೂಲಕ ಯೋಜನೆ ಸದುಪಯೋಗ ಮಾಡಿಕೊಳ್ಳುವಂತೆ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕ ಯೋಗಾನಂದ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.