ಸಂಘದಲ್ಲಿ 89.87ಲಕ್ಷ ರೂ. ಷೇರು ಬಂಡವಾಳ

Published on

ಯಳಂದೂರು: ಯಳಂದೂರು ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ವಾರ್ಷಿಕ ಸಭೆ ಮಂಗಳವಾರ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ನಡೆಯಿತು.

ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ಪುಟ್ಟರಾಜು ಸಂಘದ ವಾರ್ಷಿಕ ವರದಿ ಮಂಡಿಸಿ ಮಾತನಾಡಿ, ಸಂಘದಲ್ಲಿ 2023ಕ್ಕೆ 3053 ಷೇರುದಾರರಿದ್ದಾರೆ. ಸದಸ್ಯರಿಂದ 79.90 ಲಕ್ಷ ರೂ. ಹಾಗೂ ಸರ್ಕಾರದಿಂದ 2 ಲಕ್ಷ ರೂ.ಗಳ ಷೇರು ಬಂಡವಾಳವನ್ನು ಸಂಘ ಹೊಂದಿದೆ. ಒಟ್ಟು 599 ಜನರಿಂದ 11.89 ಲಕ್ಷ ರೂ. ಷೇರು ಹಣವನ್ನು ಪಡೆದು 2024 ಕ್ಕೆ ಒಟ್ಟು 3097 ಸದಸ್ಯರಿಂದ 89.87 ಲಕ್ಷ ರೂ. ಷೇರು ಬಂಡವಾಳ ಹಾಗೂ ಸರ್ಕಾರದ ಷೇರು 2 ಲಕ್ಷ ರೂ. ಹಣ ಸೇರಿಸಿ ಒಟ್ಟು 91.80 ಲಕ್ಷ ರೂ. ಹೊಂದಿದ್ದೇವೆ. ರೈತರು, ಕೃಷಿ ಕಾರ್ಮಿಕರು ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದವರು, ಹಿಂದುಳಿದವರು ಹಾಗೂ ಅಲ್ಪಸಂಖ್ಯಾತರನ್ನು ಗುರುತಿಸಿ ಅವರನ್ನು ಷೇರುದಾರರಾಗಿ ಮಾಡುವ ಮೂಲಕ ಏಳಿಗೆಗೆ ಶ್ರಮಿಸುತ್ತಿದೆ ಎಂದು ಮಾಹಿತಿ ನೀಡಿದರು.

ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ಸಂಘದ ಸದಸ್ಯರ ಮಕ್ಕಳನ್ನು ಸನ್ಮಾನಿಸಲಾಯಿತು. ಅಧ್ಯಕ್ಷ ಎಂ.ರಾಜಶೇಖರ್, ಉಪಾಧ್ಯಕ್ಷ ಬಾಬುಸ್ವಾಮಿ, ವೈ.ಎಸ್.ನಂಜಶೆಟ್ಟಿ, ಮಲ್ಲಿಕಾರ್ಜುನಸ್ವಾಮಿ, ಅನಿಲ್, ವೈ.ಎಂ.ಜಯರಾಮ್, ಮಹೇಶ್, ರಾಜಮ್ಮ, ಪುಟ್ಟಚಾಮಮ್ಮ, ಮಾದೇಶ್, ರವಿ, ಅನಿಲ್‌ಕುಮಾರ್, ರವಿಕುಮಾರ್, ರಾಕೇಶ್, ಕೆ.ಶಿವಕುಮಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net