ಶಾಸಕರಿಂದ ಗೃಹಲಕ್ಷ್ಮೀ ಯೋಜನೆ ಚಾಲನೆ

20 HANUR 1
Published on

ಚಾಮರಾಜನಗರ: ಜಿಲ್ಲಾದ್ಯಂತ ಗೃಹಲಕ್ಷ್ಮೀ ಯೋಜನೆಗೆ ಗುರುವಾರ ಚಾಲನೆ ದೊರೆತಿದ್ದು, ತಾಲೂಕು ಕೇಂದ್ರಗಳಲ್ಲಿ ಆಯಾ ಕ್ಷೇತ್ರಗಳ ಶಾಸಕರು ಚಾಲನೆ ನೀಡಿದರು.

ಚಾಮರಾಜನಗರದಲ್ಲಿ ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪಾನಾಗ್ ಯೋಜನೆಯ ನೊಂದಣಿ ಆರಂಭಿಸಿದರು. ಕೊಳ್ಳೇಗಾಲ ಕ್ಷೇತ್ರದಲ್ಲಿ ಶಾಸಕ ಎ.ಆರ್.ಕೃಷ್ಣಮೂರ್ತಿ, ಹನೂರಿನಲ್ಲಿ ಶಾಸಕ ಎಂ.ಆರ್.ಮಂಜುನಾಥ್ ಕಾರ್ಯಕ್ರಮ ಉದ್ಘಾಟಿಸಿದರು. ಗುಂಡ್ಲುಪೇಟೆಯಲ್ಲಿ ತಹಸೀಲ್ದಾರ್ ಶ್ರೀಶೈಲ ಯಮನಪ್ಪ ತಳವಾರ್ ಚಾಲನೆ ನೀಡಿದರು.

ನಾಲ್ಕು ತಾಲೂಕುಗಳ ಕೇಂದ್ರದಲ್ಲಿ ಚಾಲನೆ ದೊರೆತಿರುವ ಗೃಹಲಕ್ಷ್ಮೀ ಯೋಜನೆ ಆರಂಭದ ಕಾರ್ಯಕ್ರಮದಲ್ಲಿ ಸಾಂಕೇತಿಕವಾಗಿ ಕೆಲವು ಮಹಿಳೆಯರ ಹೆಸರು ನೊಂದಣಿ ಮಾಡಲಾಯಿತು. ಈ ಯೋಜನೆಯನ್ನು ಅರ್ಹ ಮಹಿಳೆಯರು ಬಳಸಿಕೊಳ್ಳಬೇಕೆಂದು ಶಾಸಕರು, ಅಧಿಕಾರಿಗಳು ಕೋರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net