ರೋಟರಿ ವತಿಯಿಂದ ಡಯಾಲೀಸಿಸ್ ಸೆಂಟರ್

Dr.Nagarjun
Published on

ಚಾಮರಾಜನಗರ: ರೋಟರಿ ಕ್ಲಬ್ ಚಾಮರಾಜನಗರ ಹಾಗೂ ರೋಟರಿ ಐವರಿ ಸಿಟಿ ಮೈಸೂರು ಸಹಯೋಗದಲ್ಲಿ ಸೆ.26 ರಂದು ರೋಟರಿ ಬಿಎಸ್ವಿ ನಾಗಪ್ಪ ಶೆಟ್ಟಿ ಡಯಾಲಿಸಿಸ್ ಕೇಂದ್ರವನ್ನು ಲೋಕಾರ್ಪಣೆ ಮಾಡಲಾಗುವುದು ಎಂದು ರೋಟರಿ ಡಯಾಲಿಸೀಸ್ ಟ್ರಸ್ಟ್ ಸದಸ್ಯ ಡಾ.ನಾಗರ್ಜುನ್ ತಿಳಿಸಿದರು.

ನಗರದ ರೋಟರಿ ಭವನದ ಆವರಣದಲ್ಲಿ ನೂತನವಾಗಿ ನಿರ್ಮಾಣ ಮಾಡಿರುವ ಡಯಾಲಿಸೀಸ್ ಕೇಂದ್ರವನ್ನು ಅಂದು ಸಂಜೆ 5 ಗಂಟೆಗೆ ಮೈಸೂರಿನ ಮಂಗಳೂರು ಗಣೇಶ ಬೀಡಿಯ ಮಾಲೀಕ ಜಗನ್ನಾಥ ಶೆಣೈ ಮತ್ತು ಎನ್‌ಆರ್ ಗ್ರ್ೂ ಆ್ ಕಂಪನಿಯ ಅಧ್ಯಕ್ಷ ಆರ್.ಗುರು ಉದ್ಘಾಟನೆ ಮಾಡುವರು. ಎಂಎಸ್‌ಐಎಲ್ ಅಧ್ಯಕ್ಷ ಹಾಗೂ ಶಾಸಕ ಸಿ.ಪುಟ್ಟರಂಗಶೆಟ್ಟಿ, ಜಿಲ್ಲಾಧಿಕಾರಿ ಶಿಲ್ಪಾನಾಗ್, ಬಿಎಸ್‌ವಿ ಪೌಂಢೇಶನ್ ಅಧ್ಯಕ್ಷ ಬಿ.ಎಸ್.ವೆಂಕಟನಾಗಪ್ಪಶೆಟ್ಟಿ ಹಾಗೂ ರೋಟರಿ ಜಿಲ್ಲಾ ಗೌರ್‌ನರ್ ವಿಕ್ರಮ್ ದತ್ತ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು ಎಂದು ಮಂಗಳವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ರೋಟರಿ ವತಿಯಿಂದ ಕಳೆದ ಮೂರು ವರ್ಷಗಳ ಹಿಂದೆ 4 ಡಯಾಲೀಸಿಸ್ ಯಂತ್ರಗಳನ್ನು ಅಳವಡಿಸಿ ಡಯಾಲೀಸಿಸ್ ಕೇಂದ್ರವನ್ನು ಶುರುಮಾಡಿದೆವು. ಕೇವಲ 499 ರೂ. ಗಳಿಗೆ ಡಯಾಲೀಸಿಸ್ ಮಾಡುವ ಮೂಲಕ ಬಡ ಮತ್ತು ಮಧ್ಯಮ ವರ್ಗದ ರೋಗಿಗಳಿಗೆ ನೆರವಾಗಿದ್ದೆವು. ಚಾ.ನಗರದಲ್ಲಿ ಡಯಾಲಿಸಿಸ್ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದೆ ಎಂಬುದನ್ನು ಮನಗಂಡು ರೋಟರಿ ಕ್ಲಬ್ ಚಾಮರಾಜನಗರ, ಮೈಸೂರಿನ ರೋಟರಿ ಐವರಿ ಸಿಟಿ, ರೋಟರಿ ಮೈಸೂರು ಕ್ಲಬ್ ಹಾಗೂ ಇನ್ನಿತರೆ ಸಂಘ ಸಂಸ್ಥೆಗಳು ಮತ್ತು ದಾನಿಗಳ ನೆರವಿನಿಂದ ಸುಸಜ್ಜಿತವಾದ ಡಯಾಲೀಸಿಸ್ ಕೇಂದ್ರವನ್ನು ತೆರೆಯಲಾಗುತ್ತಿದೆ. ಇದು ಮೂತ್ರಪಿಂಡ ರೋಗದಿಂದ ಬಳಲುತ್ತಿರುವ ರೋಗಿಗಳಿಗೆ ಸಹಕಾರಿಯಾಗಲಿದೆ ಎಂದು ತಿಳಿಸಿದರು.

ಗೋಷ್ಠಿಯಲ್ಲಿ ರೋಟರಿ ಸಂಸ್ಥೆಯ ಅಧ್ಯಕ್ಷ ಎಲ್.ನಾಗರಾಜು, ಕಾರ್ಯದರ್ಶಿ ಗುರುಸ್ವಾಮಿ, ರೋಟರಿ ಡಯಾಲಿಸಿಸ್ ಟ್ರಸ್ಟ್‌ನ ರಮೇಶ್, ಸುಭಾಷ್, ಆರ್.ಎಂ.ಸ್ವಾಮಿ, ಕಾಗಲವಾಡಿ ಚಂದ್ರು ಹಾಜರಿದ್ದರು.

ಅಂದಾಜು 1 ಕೋಟಿ ವೆಚ್ಚದಲ್ಲಿ ನಿರ್ಮಾಣ:
ನಗರದ ರೋಟರಿ ಭವನದ ಆವರಣದಲ್ಲಿ ನಿರ್ಮಾಣ ಮಾಡಿರುವ ನೂತನ ಡಯಾಲಿಸಿಸ್ ಕೇಂದ್ರವನ್ನು ರೋಟರಿ ಮೈಸೂರು ಕ್ಲಬ್ ಸಹಕಾರದಲ್ಲಿ ಅಂದಾಜು 1.20 ಕೋಟಿ ರೂ, ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ಡಯಾಲಿಸಿಸ್ ಕೇಂದ್ರದಲ್ಲಿ ಅತ್ಯಾಧುನಿಕ ತಂತ್ರಜ್ಞಾನಗಳೊಂದಿಗೆ 10 ಡಯಾಲಿಸಿಸ್ ಯಂತ್ರಗಳನ್ನು ಅಳವಡಿಸಲಾಗಿದೆ. ಅದರಲ್ಲಿ ಒಂದು ಯಂತ್ರವನ್ನು ಎಚ್‌ಐವಿ ಮತ್ತು ಎಪಟೈಟಿಸ್-ಬಿ ಸೋಂಕಿತರಿಗೆ ಮೀಸಲು ಇರಿಸಲಾಗಿದೆ. ಅದೇ ಆವರಣದಲ್ಲೇ ತುರ್ತು ಚಿಕಿತ್ಸಾ ಘಟಕವು ಇರಲಿದ್ದು, ನ್ರೆಾಲಜಿಸ್ಟ್ ಡಾ.ಅನಿಕೇತನ್ ಕಾರ್ಯನಿರ್ವಹಿಸಲಿದ್ದಾರೆ. ರೋಗಿಗಳಿಗೆ ಬೇಕಾಗುವ ಎಲ್ಲಾ ಸೌಕರ್ಯ ಮತ್ತು ಸಲಕರಣೆಗಳನ್ನು ಒದಗಿಸಲಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net