

ಚಾಮರಾಜನಗರ: ಕಲಾವಿದರ ಆರೋಗ್ಯ ದೃಷ್ಠಿಯಿಂದ ಕಲಾವಿದರ ಮಾಶಾಸನಕ್ಕಿರುವ 60 ವರ್ಷ ವಯೋಮಿತಿಯನ್ನು 50 ವರ್ಷಕ್ಕೆ ಇಳಿಸಬೇಕು ಎಂದು ಒತ್ತಾಯಿಸಿ ಡಾ.ಎಸ್.ಪಿ. ಬಾಲಸುಬ್ರಹ್ಮಣ್ಯಂ ಗಾನಗಂಧರ್ವ ಸಾಂಸ್ಕೃತಿಕ ಕಲಾವೇದಿಕೆ ವತಿಯಿಂದ ಮನವಿ ಸಲ್ಲಿಸಲಾಯಿತು.
ನಗರದ ಜಿಲ್ಲಾಡಳಿತ ಭವನದಲ್ಲಿ ಬುಧವಾರ ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು. ಜಿಲ್ಲೆಯು ಕಲೆಗಳ ತವರೂರಾಗಿದ್ದು, ಮೇರುನಟ ಡಾ.ರಾಜ್‌ಕುಮಾರ್ ಅವರಂತಹ ಅನೇಕ ಕಲಾವಿದರಗಳ ಜನ್ಮಸ್ಥಳವೂ ಕೂಡ ಇದಾಗಿದೆ ಹೀಗಾಗಿ ಕಲಾವಿದರ ಮಾಶಾಸನ ಹೆಚ್ಚಿಸಬೇಕು. ಜಿಲ್ಲೆಯ ಕುರುಬನಕಟ್ಟೆಯಲ್ಲಿರುವ ಜಾನಪದ ಅಧ್ಯಯನ ಕೇಂದ್ರವನ್ನು ಚಾಮರಾಜನಗರ ಜಿಲ್ಲಾ ಕೇಂದ್ರಕ್ಕೆ ವರ್ಗಾಹಿಸಬೇಕು. ರಾಜ್ಯ ಸರ್ಕಾರ ಕಲಾವಿದರಿಗೆ ಯಾವುದಾದರೊಂದು ಉಚಿತ ಸೌಲಭ್ಯ ಒದಗಿಸಬೇಕೆಂದು ಕೋರಿದರು.
ಡಾ.ಎಸ್.ಪಿ.ಬಾಲಸುಬ್ರಹ್ಮಣ್ಯಂ ಗಾನಗಂಧರ್ವ ಸಾಂಸ್ಕೃತಿಕ ಕಲಾವೇದಿಕೆ ಗೌರವ ಅಧ್ಯಕ್ಷ ಸುರೇಶ್, ಜಯರಾಜ, ಮೂರ್ತಿ, ಬಂಗಾರು, ವಸಂತ ನಾಗರಾಜ್, ಬೊಮ್ಮಾಯಿ, ಆದಿಲ್ ಇತರರು ಹಾಜರಿದ್ದರು.