

ಕೊಳ್ಳೇಗಾಲ: ಹನೂರು ತಾಲೂಕಿನಲ್ಲಿ ಇತ್ತೀಚೆಗೆ ನಡೆದ ಚಾಮರಾಜನಗರ ಜಿಲ್ಲಾ ಮಟ್ಟದ ಪದವಿ ಪೂರ್ವ ಕಾಲೇಜುಗಳ 2024-25ನೇ ಸಾಲಿನ ಕ್ರೀಡಾಕೂಟದಲ್ಲಿ ಪಟ್ಟಣದ ನಿಸರ್ಗ ಸ್ವತಂತ್ರ ಪದವಿ ಪೂರ್ವ ಕಾಲೇಜಿನ 42 ಕ್ರೀಡಾಪಟುಗಳು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಅಥ್ಲೆಟಿಕ್ಸ್ ವಿಭಾಗ: ಜಾವಲಿನ್ ಥ್ರೋನಲ್ಲಿ ವಿದ್ಯಾರ್ಥಿ ಚಿರಂಜೀವಿ ದ್ವಿತೀಯ ಸ್ಥಾನ, 800 ಮೀ. ಓಟದಲ್ಲಿ ಪವನ್‌ಕುಮಾರ್ ದ್ವಿತೀಯ ಸ್ಥಾನ, ಎತ್ತರ ಜಿಗಿತದಲ್ಲಿ ಡಿ.ಆಕಾಶ್ ದ್ವಿತೀಯ ಸ್ಥಾನ, ಆರ್.ರೇಖಾ ದ್ವಿತೀಯ ಸ್ಥಾನ, ಗುಡ್ಡಗಾಡು ಓಟದಲ್ಲಿ ನವೀನ್ 4 ನೇ ಸ್ಥಾನ, ನಡಿಗೆ ಸ್ಫರ್ಧೆಯಲ್ಲಿ ಚಂದನ್ ತೃತೀಯ ಸ್ಥಾನ, ತ್ರಿವಿಧ ಜಿಗಿತದಲ್ಲಿ ವಿಕಾಶ್ ತೃತೀಯ ಸ್ಥಾನ ಪಡೆದಿದ್ದಾರೆ.
ಅಂತೆಯೆ, ಗುಂಪು ಆಟಗಳ ವಿಭಾಗದಲ್ಲಿ ಥ್ರೋಬಾಲ್ ಸ್ಫರ್ಧೆಯಲ್ಲಿ ಸ್ವಾಮಿ ಮತ್ತು ತಂಡ ಪ್ರಥಮ ಸ್ಥಾನ, ಬಾಸ್ಕೆಟ್‌ಬಾಲ್‌ನಲ್ಲಿ ಅಲೆಕ್ಷ್ ಜೋನಾಥನ್ ಮತ್ತು ತಂಡ ಪ್ರಥಮ ಸ್ಥಾನ, ಶಟಲ್ ಬ್ಯಾಡ್ಮಿಂಟನ್‌ನಲ್ಲಿ ಭಾಸ್ಕರ್ ಮತ್ತು ತಂಡ ಪ್ರಥಮ ಸ್ಥಾನ, ಚದುರಂಗ ಸ್ಪರ್ಧೆಯಲ್ಲಿ ಸಿ.ಎಸ್.ಸಂಜಯ್ ಪ್ರಥಮ ಸ್ಥಾನ , ಬಾಲಾಜಿ 5ನೇ ಸ್ಥಾನ, ವಾಲಿಬಾಲ್ ಸ್ಪರ್ಧೆಯಲ್ಲಿ ಸಿದ್ದರಾಜು ಮತ್ತು ತಂಡ ದ್ವಿತೀಯ ಸ್ಥಾನ, ಫುಟ್‌ಬಾಲ್‌ನಲ್ಲಿ ದರ್ಶನ್ ಮತ್ತು ತಂಡ ದ್ವಿತೀಯ ಸ್ಥಾನ, ಶಟಲ್ ಬ್ಯಾಡ್ಮಿಂಟನ್‌ನಲ್ಲಿ ದೀಕ್ಷಿತ ಮತ್ತು ತಂಡ ದ್ವಿತೀಯ ಸ್ಥಾನ, ಥ್ರೋಬಾಲ್‌ನಲ್ಲಿ ಮೇಘಲಾ ಮತ್ತು ತಂಡ ದ್ವಿತೀಯ ಸ್ಥಾನ, ಖೋ ಖೋ ಸ್ಪರ್ಧೆಯಲ್ಲಿ ಮನೋಜ್ ಮತ್ತು ಮೋಹಿತ್ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಈ ಕ್ರೀಡಾಪಟುಗಳಿಗೆ ಮಾನಸ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯ ಅಧ್ಯಕ್ಷ ನಾಗರಾಜು, ಕಾರ್ಯದರ್ಶಿ ಡಾ.ಎಸ್.ದತ್ತೇಶ್‌ಕುಮಾರ್, ಪ್ರಾಂಶುಪಾಲರ ಡಿ.ಕೃಷ್ಣೇಗೌಡ ಹಾಗೂ ದೈಹಿಕ ಶಿಕ್ಷಣ ನಿರ್ದೇಶಕ ಜಿ.ರಾಜಪ್ಪ, ತಂಡದ ಮೇಲ್ವಿಚಾರಕರು ಮತ್ತು ಕಾಲೇಜಿನ ಸಿಬ್ಬಂದಿ ಅಭಿನಂದನೆ ಸಲ್ಲಿಸಿದ್ದಾರೆ.