

ಚಾಮರಾಜನಗರ: ಬ್ರಾಹ್ಮಣ ಸಮುದಾಯಕ್ಕೆ ನಗರಸಭೆಯ ಉಪಾಧ್ಯಕ್ಷ ಸ್ಥಾನ ನೀಡಿ ಸಮಾಜ ಸೇವೆ ಮಾಡಲು ಅವಕಾಶ ನೀಡಿರುವುದು ಹೆಮ್ಮೆಯ ಸಂಗತಿ ಎಂದು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಜಿ.ಎಂ.ಹೆಗಡೆ ತಿಳಿಸಿದರು.
ನಗರಸಭೆ ನೂತನ ಉಪಾಧ್ಯಕ್ಷೆ ಮಮತಾ ಬಾಲಸುಬ್ರಹ್ಮಣ್ಯಂ ಅವರ ನಿವಾಸದಲ್ಲಿ ಜಿಲ್ಲಾ ಬ್ರಾಹ್ಮಣ ಸಂಘದ ವತಿಯಿಂದ ಶುಕ್ರವಾರ ಸನ್ಮಾನ ಮಾಡಿ ಮಾತನಾಡಿದ ಅವರು, ಸರ್ವರ ಒಳಿತಿಗಾಗಿ ಬ್ರಾಹ್ಮಣ ಸಮುದಾಯ ಕಾರ್ಯ ನಿರ್ವಹಿಸಲಿ. ಸಮಾಜ ಉನ್ನತವಾಗಿ ಬೆಳೆಯಲಿ ಎಂದರು.
ಸಂಘದ ಪ್ರಧಾನ ಕಾರ್ಯದರ್ಶಿ ಸುರೇಶ್ ಎನ್ ಋಗ್ವೇದಿ ಮಾತನಾಡಿ, ನಗರಸಭೆಗೆ 50 ವರ್ಷಗಳ ನಂತರ ಬ್ರಾಹ್ಮಣ ಸಮುದಾಯದವರಿಗೆ ಉಪಾಧ್ಯಕ್ಷ ಸ್ಥಾನ ಸಿಕ್ಕಿರುವುದು ಸಂತೋಷ ತಂದಿದೆ. ಸಮಾಜಕ್ಕಾಗಿ ,ರಾಷ್ಟ್ರಕ್ಕಾಗಿ ಸೇವೆಯನ್ನು ಸಲ್ಲಿಸುವ ಮೂಲಕ ಅಧಿಕಾರವನ್ನು ಸದುಪಯೋಗಪಡಿಸಿಕೊಂಡು ಅಭಿವೃದ್ಧಿಯ ದಿಕ್ಕಿನಲ್ಲಿ ಸಾಗಬೇಕು. ಸರ್ವರನ್ನೂ ಪ್ರೀತಿಸೋಣ, ಸಮಾಜವನ್ನು ಬೆಳೆಸೋಣ ಎಂದು ಹೇಳಿದರು.
ಸಂಘದ ಖಜಾಂಚಿ ಬಾಲಸುಬ್ರಹ್ಮಣ್ಯಂ, ಸುರೇಶ್ ಕೇಶವಮೂರ್ತಿ ,ಲಕ್ಷ್ಮಿ, ನರಸಿಂಹ, ಪ್ರತಾಪ್, ಸತೀಶ್, ಚೈತನ್ಯ ಹೆಗಡೆ ,ರಾಧಾಕೃಷ್ಣ , ಬಿಳಿಗಿರಿ ಶ್ರೀನಿವಾಸ್, ವತ್ಸಲಾ ರಾಜಗೋಪಾಲ್, ನಾಗಶ್ರೀ ಉಪಸ್ಥಿತರಿದ್ದರು.