ಯುವ ಮೋರ್ಚಾದಿಂದ ರಕ್ತದಾನ

20rajesh11
Published on

ಚಾಮರಾಜನಗರ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ 74 ವರ್ಷದ ಹುಟ್ಟುಹಬ್ಬದ ಪ್ರಯುಕ್ತ ನಗರದ ಬಿಜೆಪಿಯಲ್ಲಿ ಬಿಜೆಪಿ ಯುವ ಮೋರ್ಚಾದ ವತಿಯಿಂದ ಶುಕ್ರವಾರ ರಕ್ತದಾನ ಶಿಬಿರವನ್ನು ಆಯೋಜನೆ ಮಾಡಲಾಗಿತ್ತು.

ನಗರದ ನೂತನ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಸೇವಾ ಕಾರ್ಯಕ್ರಮದಲ್ಲಿ 20ಕ್ಕೂ ಹೆಚ್ಚು ಮುಖಂಡರು ರಕ್ತದಾನ ಮಾಡಿದರು. ಶಿಬಿರಕ್ಕೆ ಕೇಂದ್ರ ಪರಿಹಾರ ಸಮಿತಿ ಮಾಜಿ ಅಧ್ಯಕ್ಷ ಎಂ. ರಾಮಚಂದ್ರ ಚಾಲನೆ ನೀಡಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಪ್ರಧಾನಿಯಾಗಿ ಉತ್ತಮ ಆಡಳಿತ ನೀಡುವ ಜತೆಗೆ ವಿಶ್ವ ಮಟ್ಟದಲ್ಲಿ ಭಾರತವನ್ನು ಎತ್ತರಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಅವರು ದೂರದೃಷ್ಟಿತ್ವ, ಭ್ರಷ್ಟಾಚಾರ ರಹಿತ ಆಡಳಿತ ದೇಶದ ಅಭಿವೃದ್ದಿಗೆ ಪೂರಕವಾಗಿದೆ ಎಂದರು.

ಕಾಡಾ ಮಾಜಿ ಅಧ್ಯಕ್ಷ ಜಿ. ನಿಜಗುಣರಾಜು ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರು ಆಡಳಿತದಲ್ಲಿ ದೆಹಲಿಯಲ್ಲಿ ಘೋಷಣೆಯಾದ ಯೋಜನೆಯ ಅನುದಾನ ಒಂದು ಪೈಸೆ ಕಡಿಮೆ ಇಲ್ಲದಂತೆ ಫಲಾನುಭವಿಗಳ ಖಾತೆಗೆ ತಲುಪುತ್ತಿದೆ. ಹಗಲು ರಾತ್ರಿ ಎನ್ನದೇ ದೇಶದ ಅಭಿವೃದ್ದಿಗೆ ತಮ್ಮನ್ನೇ ಸಮರ್ಪಣೆ ಮಾಡಿಕೊಂಡಿರುವ ಮೋದಿ ಅವರು ವಿಶ್ವ ನಾಯಕರು ಎಂದು ಬಣ್ಣಿಸಿದರು.

ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಸೂರ್ಯಕುಮಾರ್ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರು ದೇಶಕ್ಕೆ ಸುಭದ್ರವಾದ ಆಡಳಿತ ನೀಡುವ ಜತೆಗೆ ಎಲ್ಲ ವರ್ಗದಜನರಿಗೂ ತಲುಪುವಂತಹ ಯೋಜನೆಗಳನ್ನು ಜಾರಿ ಮಾಡಿದರು. ಅವರ ಹುಟ್ಟುಹಬ್ಬನ್ನು ಸೇವಾ ಕಾರ್ಯಗಳ ಮಾಡುವ ಜೊತೆಗೆ ಯುವ ಮೋರ್ಚಾದಿಂದ ರಕ್ತದಾನ ಶಿಬಿರವನ್ನು ಆಯೋಜನೆ ಮಾಡಲಾಗಿದೆ ಎಂದರು.

ನಗರಸಭೆ ಅಧ್ಯಕ್ಷ ಸುರೇಶ್, ಉಪಾಧ್ಯಕ್ಷ ಮಮತಾ ಬಾಲಸುಬ್ರಮಣ್ಯ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಪಿ. ವೃಷಬೇಂದ್ರಪ್ಪ, ಮೂಡ್ನಾಕೂಡು ಪ್ರಕಾಶ್, ನೂರೊಂದುಶೆಟ್ಟಿ, ನೂರೊಂದುಶೆಟ್ಟಿ, ಎಸ್. ಬಾಲಸುಬ್ರಮಣ್ಯ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆನಂದ್ ಭಗೀರಥ್, ಅನಂದ್, ಮಹಿಳಾ ಮೊರ್ಚಾ ಅಧ್ಯಕ್ಷೆ ಮಲೆಯೂರು ಕಮಲಮ್ಮ, ಜಯಶೀಲಾ ರಾಜಶೇಖರ್, ವನಾಜಾಕ್ಷಿ, ದಾಕ್ಷಾಯಿನಿ,ಚಂದ್ರಶೇಖರ್, ರಂಗಸ್ವಾಮಿ, ಕೂಸಣ್ಣ, ನಗರಸಭೆ ಸದಸ್ಯರಾದ ಶಿವುನಾಯಕ್, ನಟರಾಜು, ಕುಲಗಾಣ ಶಾಂತಮೂರ್ತಿ, ಜಯಸುಂದರ್, ಶೈಲಾ, ಮಹೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net