ಚಾಮರಾಜನಗರ : ಚಾ.ನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಹಾಗೂ ಬೋಧನಾ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ 9 ಜನ ಹೊರಗುತ್ತಿಗೆ ನೌಕರರನ್ನು ಕೆಲಸದಿಂದ ತೆಗೆದುಹಾಕಲಾಗಿದ್ದು, ಮತ್ತೆ ಸಿಮ್ಸ್‌ನಲ್ಲಿ ಹೊರಗುತ್ತಿಗೆ ನೌಕರರ ಮೇಲೆ ದೌರ್ಜನ್ಯ ಮುಂದುವರಿಯುತ್ತಲೇ ಇದೆ.
ಸಿಮ್ಸ್ ಆಸ್ಪತ್ರೆಯಲ್ಲಿ ಈ ಹಿಂದೆ ನಡೆದ ಗಲಭೆ ಪ್ರಕರಣದಲ್ಲಿ 23 ಹೊರಗುತ್ತಿಗೆ ನೌಕರರು ಮತ್ತು ಹೊರಗಿನವರು ಸೇರಿದಂತೆ ಒಟ್ಟು 33 ಜನರ ಮೇಲೆ ಎ್ಐಆರ್ ದಾಖಲಾಗಿತ್ತು. ಈ ನಡುವೆ ಲ್ಯಾಬ್ ಟೆಕ್ನಿಷಿಯನ್, ಡಿ ಗ್ರೂಪ್, ಸ್ಕಾೃವೆಂಜರ್ ಹಾಗೂ ಚಾಲಕರಾಗಿ ಹೊರಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ನೌಕರರನ್ನು ಎ್ಐಆರ್ ದಾಖಲಾಗಿದೆ ಎಂಬ ಕಾರಣ ನೀಡಿ, ಏಕಾಏಕಿ ಕೆಲಸದಿಂದ ತೆಗೆದುಹಾಕಲಾಗಿತ್ತು. ಇದರಲ್ಲಿ ಡಿ ಗ್ರೂಪ್ ಹುದ್ದೆಯಲ್ಲಿ ಕೆಲಸಮಾಡುತ್ತಿದ್ದ ಕೆಂಪರಾಜು, ಪ್ರೀತಮ್, ಸುರೇಶ್, ಮಂಜುನಾಥ್, ಪ್ರದೀಪ್, ಮಹದೇವಸ್ವಾಮಿ, ಆನಂದ ಹಾಗೂ ಅಂಗವಿಕಲರಾಗಿರುವ ಮಹದೇವಸ್ವಾಮಿ, ರಂಗಸ್ವಾಮಿ ಅವರು, ಈ ಹಿಂದಿನ ಡೀನ್ ಡಾ.ಸಂಜೀವ್ ಅವರು ನೀಡಿದ ಸ್ಪಷ್ಟನೆಯೊಂದಿಗೆ ಕೆಲಸಕ್ಕೆ ಸೇರಿಸಿಕೊಳ್ಳಲಾಗಿತ್ತು.
ಆದರೇ 13 ಜನರ ಮೇಲೆ ಎ್ಐಆರ್ ದಾಖಲಾಗಿದೆ ಎಂಬ ಕಾರಣಕ್ಕೆ ಕೆಲಸದಿಂದ ತೆಗೆದು ಹಾಕಲಾಗಿತ್ತು. ಈ ಸಂಬಂಧ 13 ಜನ ನೌಕರರು ಸಿಮ್ಸ್ ಆಡಳಿತ ಮಂಡಳಿ ಹಾಗೂ ಗುತ್ತಿಗೆ ಕಂಪನಿ ವಿರುದ್ಧ ಜಿಲ್ಲಾಡಳಿತ ಭವನದ ಮುಂಭಾಗ ಕಳೆದ 9 ದಿನಗಳಿಂದ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೇ ಹೊರಗುತ್ತಿಗೆ ಪಡೆದಿರುವ ಸ್ವಿಸ್ ಏಜೆನ್ಸಿ, ಈ ಹಿಂದೆ ಕೆಲಸಕ್ಕೆ ಸೇರಿಸಿಕೊಂಡಿದ್ದ 9 ಜನ ಡಿ ಗ್ರೂಪ್ ನೌಕರರನ್ನು ಕೆಲಸದಿಂದ ತೆಗೆದುಹಾಕುವ ಮೂಲಕ ದೌರ್ಜನ್ಯ ಮುಂದುವರಿಸಿದೆ. ಸ್ವಿಸ್ ಏಜೆನ್ಸಿ ಸೂಕ್ತ ಸಮಯಕ್ಕೆ ಹೊರಗುತ್ತಿಗೆ ನೌಕರರಿಗೆ ಸಂಬಳ ನೀಡುವುದಿಲ್ಲ, ಸಮವಸಗಳನ್ನು ವಿತರಣೆ ಮಾಡುವುದಿಲ್ಲ, ನೌಕರರನ್ನು ಸೂಕ್ತ ರೀತಿಯಲ್ಲಿ ನಡೆಸಿಕೊಳ್ಳವುದಿಲ್ಲ ಎಂಬ ಆರೋಪಗಳು ಹಿಂದಿನಿಂದಲೂ ಕೇಳಿಬರುತ್ತಲೇ ಇತ್ತು. ಈಗ ನೇರವಾಗಿ ಹೊರಗುತ್ತಿಗೆ ನೌಕರರನ್ನು ಕೆಲಸದಿಂದ ತೆಗೆದುಹಾಕುವ ಮೂಲಕ, ಬಡ ಕಾರ್ಮಿಕರ ಮೇಲೆ ದೌರ್ಜನ್ಯ ನಡೆಸಲು ಮುಂದಾಗಿದೆ ಎಂದು ಹೊರಗುತ್ತಿಗೆ ನೌಕರರು ದೂರಿದರು.
ಏಜೆನ್ಸಿಯಿಂದ ನಿರಂತರ ದೌರ್ಜನ್ಯ:
ಸಿಮ್ಸ್ ಆಸ್ಪತ್ರೆ ಪ್ರಾರಂಭವಾದ ದಿನಗಳಿಂದಲೂ ಹೊರಗುತ್ತಿಗೆ ಪಡೆದಿರುವ ಏಜೆನ್ಸಿ ಹೊರಗುತ್ತಿಗೆ ನೌಕರರ ಮೇಲೆ ನಿರಂತರವಾಗಿ ಒಂದಿಲ್ಲೊಂದು ದೌರ್ಜನ್ಯ ನಡೆಸಿಕೊಂಡು ಬರುತ್ತಿದೆ. ಹೊರಗುತ್ತಿಗೆ ನೌಕರರು ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳುವ ಉದ್ದೇಶದಿಂದ ಸಿಮ್ಸ್ ಹೊರಗುತ್ತಿಗೆ ನೌಕರರ ಸಂಘವನ್ನು ಕಟ್ಟಿಕೊಂಡಿದ್ದರು. ಈ ಹಿಂದೆ ಸುಮಾರು 15 ಕ್ಕಿಂತಲೂ ಹೆಚ್ಚು ದಿನಗಳ ಕಾಲ ಈ ಸಂಘಟನೆಯ ಮೂಲಕ ಸಿಮ್ಸ್ ಆಡಳಿತ ಮಂಡಳಿ ಹಾಗೂ ಏಜೆನ್ಸಿ ವಿರುದ್ಧ ನಿರಂತರ ಪ್ರತಿಭಟನೆ ನಡೆಸಿದ್ದರು. ಈ ಹಿಂದೆ ಸಂಘಟನೆಯಲ್ಲಿ ಮುಂದೆ ಗುರುತಿಸಿಕೊಂಡಿದ್ದ ಹೊರಗುತ್ತಿಗೆ ನೌಕರರನ್ನು ಗುರುತಿಸಿ ವಿನಾಃ ಕಾರಣ ದೌರ್ಜನ್ಯ ನಡೆಸುತ್ತಿದೆ. ಅಂತವರನ್ನೇ ಎ್ಐಆರ್ ದಾಖಲಾಗಿದೆ ಎಂಬ ಕಾರಣಕ್ಕೆ ಕೆಲಸದಿಂದ ತೆಗೆದುಹಾಕಲಾಗಿದೆ ಎಂಬ ಆರೋಪ ಕೇಳಿಬರುತ್ತಿದೆ. ಈ ಕುರಿತು ಸಿಮ್ಸ್ ಆಡಳಿತ ಮಂಡಳಿಯಾಗಲಿ, ಸ್ವಿಸ್ ಏಜೆನ್ಸಿಯಾಗಲಿ, ಜಿಲ್ಲಾಡಳಿತವಾಗಲಿ ಅಥವಾ ಯಾವ ಜನಪ್ರತಿನಿಧಿಯೇ ಆಗಲಿ ಯಾವುದೇ ರೀತಿಯಲ್ಲೂ ಕ್ರಮವಹಿಸುತ್ತಿಲ್ಲ. ಪರಿಣಾಮವಾಗಿ 30 ಕ್ಕಿಂತಲೂ ಹೆಚ್ಚಿನ ನೌಕರರ ಬದುಕು ಬೀದಿಗೆ ಬಿದ್ದಂತಾಗಿದೆ.
9 ದಿನಕ್ಕೆ ಕಾಲಿಟ್ಟ ಪ್ರತಿಭಟನೆ:
ಎ್ಐಆರ್ ಎಂಬ ಕಾರಣಕ್ಕೆ ಕೆಲಸದಿಂದ ವಜಾಗೊಂಡಿರುವ 13 ಜನ ಸಿಮ್ಸ್ ಹೊರಗುತ್ತಿಗೆ ನೌಕರರು ಜಿಲ್ಲಾಡಳಿತ ಭವನದ ಮುಂಭಾಗ ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ 9 ನೇ ದಿನಕ್ಕೆ ಕಾಲಿಟ್ಟಿದೆ. ಪ್ರತಿಭಟನೆ ನಡೆಸುತ್ತಿರುವ ನೌಕರರು ತಳ ಸಮುದಾಯದವರಾಗಿದ್ದು, ಅವರು ದುಡಿಯುತ್ತಿದ್ದ ಹಣದಿಂದಲೇ ಅವರ ಕುಟುಂಬಗಳನ್ನು ಮುನ್ನೆಡೆಸುತ್ತಿದ್ದರು. ಕಳೆದ 3 ತಿಂಗಳಿಂದ ಕೆಲಸವೂ ಇಲ್ಲದೇ, ಸಂಬಳವೂ ಇಲ್ಲದೇ 13 ಜನರ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿದೆ. ಲ್ಯಾಬ್ ಟೆಕ್ನಿಷಿಯನ್, ಡಿ ಗ್ರೂಪ್, ಸ್ಕಾೃವೆಂಜರ್ ಹಾಗೂ ಚಾಲಕರಾಗಿ ಹೊರಗುತ್ತಿಗೆ ಆಧಾರದಲ್ಲಿ ದುಡಿಯುತ್ತಿದ್ದವರ ಜೀವನ ಸಿಮ್ಸ್ ಆಡಳಿತ ಮಂಡಳಿಯ ನಿರ್ಲಕ್ಷ್ಯ ಹಾಗೂ ಏಜೆನ್ಸಿಯವರ ನಿರಂತರ ದೌರ್ಜನ್ಯದಿಂದ ಬೀದಿಗೆ ಬಿದ್ದಂತಾಗಿದೆ ಎಂದು ಪ್ರತಿಭಟನೆ ನಿರತ ಹೊರ ಗುತ್ತಿಗೆ ನೌಕರ ಆದರ್ಶಕುಮಾರ್ ವಿಜಯವಾಣಿ ಜತೆಗೆ ಮಾತನಾಡಿ ಅಳಲು ತೋಡಿಕೊಂಡರು.
ಸಿಮ್ಸ್‌ನಲ್ಲಿ ಹೊರಗುತ್ತಿಗೆ ನೌಕರರ ಸಂಘದಲ್ಲಿ ಮುಂಚೂಣಿಯಲ್ಲಿ ಇದ್ದವರನ್ನು ಗುರಿಯಾಗಿಸಿ ಎ್ಐಆರ್ ನೆಪನೀಡಿ ಏಕಾಏಕಿ ಕೆಲಸದಿಂದ ತೆಗೆದುಹಾಕಲಾಗಿದೆ. ಸಿಮ್ಸ್ ಡೀನ್ ಮತ್ತು ಏಜೆನ್ಸಿಯವರು ನೌಕರರ ಮೇಲೆ ನಿರಂತರ ದೌರ್ಜನ್ಯ ನಡೆಸುತ್ತಿದ್ದಾರೆ. ನಮ್ಮ ಪ್ರತಿಭಟನೆಗೆ ಜಿಲ್ಲಾಡಳಿತ ಕಿವಿಯಾಗಬೇಕು.ಆದರ್ಶಕುಮಾರ್, ಪ್ರತಿಭಟನೆ ನಿರತ ಹೊರಗುತ್ತಿಗೆ ನೌಕರ, ಚಾಮರಾಜನಗರ ಸ್ವಿಸ್ ಏಜೆನ್ಸಿ ಯಾವ ರೀತಿಯ ಸೂಚನೆ ನೀಡುತ್ತಾರೆ ಅದರಂತೆ ನಡೆದುಕೊಳ್ಳುತ್ತಿದ್ದೇವೆ.ಮಣಿಕಂಠ, ಸೂಪರ್‌ವೈಸರ್, ಸ್ವಿಸ್ ಏಜೆನ್ಸಿ ಹೊರಗುತ್ತಿಗೆ ನೌಕರರನ್ನು ಕೆಲಸಕ್ಕೆ ತೆಗೆದುಕೊಳ್ಳುವುದು ಹಾಗೂ ಕೆಲಸದಿಂದ ತೆಗೆದುಹಾಕುವುದು ಗುತ್ತಿಗೆ ಪಡೆದಿರುವ ಏಜೆನ್ಸಿಯವರಿಗೆ ಬಿಟ್ಟ ವಿಚಾರವಾಗಿದೆ.ಡಾ.ಮಂಜುನಾಥ್, ಡೀನ್ ಮತ್ತು ನಿರ್ದೇಶಕ, ಸಿಮ್ಸ್, ಚಾಮರಾಜನಗರ