ದೇಶಕ್ಕೆ ವಿಶ್ವೇಶ್ವರಯ್ಯನವರ ಕೊಡುಗೆ ಅಪಾರ

d2444580-43d9-4e28-b425-016de32a2f36
Published on

ಚಾಮರಾಜನಗರ :ವಿಜ್ಞಾನ, ಕೈಗಾರಿಕೆ, ವಿದ್ಯುತ್, ಕೃಷಿ, ನೀರಾವರಿ, ಸೇತುವೆಗಳ ನಿರ್ಮಾಣದ ಮೂಲಕ ದೇಶಕ್ಕೆ ಸರ್ ಎಂ.ವಿಶ್ವೇಶ್ವರಯ್ಯನವರು ನೀಡಿದ ಕೊಡುಗೆ ಅಪಾರ ಎಂದು ಬರಹಗಾರರ ಎಸ್.ಲಕ್ಷ್ಮೀನರಸಿಂಹ ತಿಳಿಸಿದರು.

ನಗರದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಭಾರತ ರತ್ನ ಸರ್ ಎಂ.ವಿಶ್ವೇಶ್ವರಯ್ಯ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ವಿಶ್ವೇಶ್ವರಯ್ಯನವರು ಭಾರತ ಕಂಡ ಶ್ರೇಷ್ಠ ಇಂಜಿನಿಯರ್. ವಿಶ್ವೇಶ್ವರಯ್ಯನವರು ಕಡು ಕಷ್ಟದಲ್ಲಿ ಪ್ರತಿಭಾಶಾಲಿಯಾಗಿ ಇಂಜಿನಿಯರ್ ಪದವಿ ಪಡೆದು ಭಾರತ ದೇಶಕ್ಕೆ ಅಲ್ಲದೆ ವಿಶ್ವಕ್ಕೆ ತಮ್ಮದೇ ಆದ ಅಮೂಲ್ಯವಾದ ಕೊಡುಗೆಯನ್ನು ನೀಡಿದರು. ಮೈಸೂರು ಸಂಸ್ಥಾನ, ಕರ್ನಾಟಕ ಹಾಗೂ ಭಾರತಕ್ಕೆ ಅಪಾರವಾದ ಗೌರವವನ್ನು ತಂದುಕೊಟ್ಟ ಮಹನೀಯರು ಎಂದರು.

ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸುರೇಶ್ ಎನ್.ಋಗ್ವೇದಿ ಮಾತನಾಡಿ, ಕಲೆ, ಸಂಗೀತ ಸಾಹಿತ್ಯ, ವಾಸ್ತು ಶಿಲ್ಪ, ನಾಟ್ಯ ಹತ್ತು ಹಲವು ಕ್ಷೇತ್ರಗಳ ಸಾಂಸ್ಕೃತಿಕ ಏಳಿಗೆಗೆ ಕನ್ನಡ ಸಾಹಿತ್ಯ ಪರಿಷತ್ತು ಶತಮಾನದಿಂದ ಶ್ರಮಿಸಲು ವಿಶ್ವೇಶ್ವರಯ್ಯ ಕಾರಣರಾಗಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಶಿವಲಿಂಗ ಮೂರ್ತಿ, ಸರಸ್ವತಿ , ವೆಂಕಟೇಶ್, ಬಾಬು, ಪರಮೇಶ್ವರಪ್ಪ, ಸತೀಶ್ ಮತ್ತು ಅಂಕಿತ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net