ಚಾಮರಾಜನಗರ: ಪ್ರೊಟೀನ್‌ಯುಕ್ತ ಆಹಾರವನ್ನು ಗರ್ಭಿಣಿ ಮತ್ತು ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಸದ್ಭಳಕೆ ಮಾಡಿ ಆರೋಗ್ಯವಂತ ಸಮಾಜಕ್ಕೆ ಸಹಕರಿಸಬೇಕು ಎಂದು ಆರೋಗ್ಯ ಕೇಂದ್ರ ವೈದಾಧಿಕಾರಿ ಮಹದೇವ್ ತಿಳಿಸಿದರು.
ನಗರಸಭಾ ವ್ಯಾಪ್ತಿಯ 10ನೇ ವಾರ್ಡಿನಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಶಿಕ್ಷಣ ಇಲಾಖೆ ಹಾಗೂ ಆರೋಗ್ಯ ಇಲಾಖೆ ವತಿಯಿಂದ ಬುಧವಾರ ಆಯೋಜಿಸಿದ್ದ ಪೋಷಣ ಅಭಿಯಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಗರ್ಭಿಣಿ ಮತ್ತು ಮಕ್ಕಳ ಸರ್ವತೋಮುಖ ಬೆಳವಣಿಗೋಸ್ಕರವಾಗಿಯೇ ಸರ್ಕಾರ ಪೋಷಣ ಅಭಿಯಾನ ಮೂಲಕ ಪ್ರೊಟೀನ್‌ಯುಕ್ತ ಆಹಾರವನ್ನು ವಿತರಣೆ ಮಾಡುತ್ತಿದೆ ಎಂದರು. ಕಾರ್ಯಕ್ರಮದಲ್ಲಿ ಶಿಶು ಅಭಿವೃದ್ದಿ ಯೋಜನಾಧಿಕಾರಿ ನಾಗೇಶ್, ಮುಖ್ಯ ಶಿಕ್ಷಕ ಶಿವರಾಜು, ಮೇಲ್ವಿಚಾರಕರಾದ ಕಸ್ತೂರಿ, ಅಂಗನವಾಡಿ ಕಾರ್ಯಕರ್ತೆಯರಾದ ಶಾರದ, ರಾಜಮ್ಮ, ಎಂ.ಮಮತಾ, ಶಾಹೀದಬಾನು, ಶೋಭ, ಸಹಾಯಕಿಯರಾದ ಮಹದೇವಮ್ಮ, ಬಸಮ್ಮಣ್ಣಮ್ಮ, ಸುನಂದ ಹಾಜರಿದ್ದರು.