ಚಾಮರಾಜನಗರ : ಜಿಲ್ಲಾಪರಿಶಿಷ್ಟ ಪಂಗಡ ವಿವಿಧೋದ್ದೇಶ ಸಹಕಾರಸಂಘ ಪ್ರಸಕ್ತ ಉತ್ತಮ ವಹಿವಾಟು ನಡೆಸಿ, 5533 ರೂ.ಗಳ ನಿವ್ವಳಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಮಹದೇವನಾಯಕ ಹೇಳಿದರು.
ನಗರದ ಜಿಲ್ಲಾಪರಿಶಿಷ್ಟ ಪಂಗಡ ವಿವಿಧೋದ್ದೇಶ ಸಹಕಾರ ಸಂಘದ ಕಚೇರಿಯಲ್ಲಿ ಬುಧವಾರ ನಡೆದ 2023-24 ನೇ ಸಾಲಿನ ಸರ್ವಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಸಂಘದ ಸದಸ್ಯರ ಆರ್ಥಿಕಮಟ್ಟ ಸುಧಾರಿಸಲು ಪ್ರಸಕ್ತ ಸಾಲಿನಲ್ಲಿ 4.10 ಲಕ್ಷ ರೂ.ಗಳ ಸಾಲಸೌಲಭ್ಯ ಒದಗಿಸಲಾಗಿದೆ. ತರಕಾರಿ ವ್ಯಾಪಾರಿಗಳು ಸೇರಿದಂತೆ ಇನ್ನಿತರೆ ಸಣ್ಣಪುಟ್ಟ ವ್ಯಾಪಾರಿಗಳಿಗೆ ಆರ್ಥಿಕ ನೆರವು ನೀಡಲು ಸಂಘ ಬದ್ದವಾಗಿದೆ ಎಂದರು.
ಪರಿಶಿಷ್ಟಪಂಗಡ ಜನಾಂಗದ 223 ಫಲಾನುಭವಿಗಳಿಗೆ ತಲಾ 1 ಸಾವಿರ ರೂ.ಗಳಿಗೆ ಮಂಜೂರಾತಿ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಸಂಘದ ಸದಸ್ಯತ್ವ ಹೆಚ್ಚಳಕ್ಕೆ ಕ್ರಮವಹಿಸಲಾಗುವುದು ಎಂದರು. ಇದೇ ವೇಳೆ ಸಂಘದ ವತಿಯಿಂದ 2023-24 ನೇ ಸಾಲಿನಲ್ಲಿ 50 ಫಲಾನುಭವಿಗಳಿಗೆ ಯಶಸ್ವಿನಿ ಯೋಜನೆಯ ಗುರುತಿನ ಕಾರ್ಡ್ ವಿತರಿಸಲಾಯಿತು. ಸಭೆಯಲ್ಲಿ ಸಂಘದ ಸದಸ್ಯರಾದ ಜಿ.ಬಿ.ರಾಜು, ನಾಗೇಶ್, ಲಿಂಗಣ್ಣ, ರಾಮಣ್ಣ, ಬಸವರಾಜು, ಪಿ.ಮಹದೇವನಾಯಕ, ಮುಖ್ಯ ಕಾರ್ಯನಿರ್ವಾಹಕ ರಾಘವೇಂದ್ರ ಹಾಜರಿದ್ದರು.