ಪಾಟ್ನಾದ ಶಾಂತಿಯ ರ‌್ಯಾಲಿಗೆ ತೆರಳಿದವರಿಗೆ ಬೀಳ್ಕೊಡುಗೆ

15rajesh2
Published on

ಚಾಮರಾಜನಗರ: ಬಿಹಾರ ರಾಜ್ಯದ ಪಾಟ್ನಾದಲ್ಲಿ ಎಐಎಫ್‌ಬಿ ವತಿಯಿಂದ ಸೆ.17 ರಂದು ನಡೆಯಲಿರುವ ಶಾಂತಿಯ ರ‌್ಯಾಲಿಗೆ ಚಾಮರಾಜನಗರದಿಂದ ತೆರಳಿದ ಭಾರತೀಯ ಭೌದ್ದ ಮಹಾಸಭಾದ ಜಿಲ್ಲಾಧ್ಯಕ್ಷ ಆರ್.ಬಸವರಾಜು ಹಾಗೂ ಸಮತಾ ಸೈನಿಕ ದಳ ಜಿಲ್ಲಾ ಉಪಾಧ್ಯಕ್ಷ ಮಲ್ಲಿಕ್ ಯಲಕ್ಕೂರು ಅವರಿಗೆ ಭಾನುವಾರ ಬೀಳ್ಕೊಡಲಾಯಿತು.

ನಗರದ ಕರಿನಂಜನಪುರ ರಸ್ತೆಯಲ್ಲಿರುವ ಸಾರನಾಥ ಬೌದ್ಧ ವಿಹಾರದಲ್ಲಿ ಸಾಮೂಹಿಕ ಬುದ್ದವಂದನೆ ಸಲ್ಲಿಸಿ ಭಾರತೀಯ ಬೌದ್ಧ ಮಹಾಸಭಾ ಜಿಲ್ಲಾಧ್ಯಕ್ಷ ಆರ್.ಬಸವರಾಜು ಮಾತನಾಡಿ, ಭಗವಾನ್ ಗೌತಮ ಬುದ್ಧರಿಗೆ ಜ್ಞಾನೋದಯ ಸ್ಥಳವಾದ ಬುದ್ಧಗಯ ವಿಶ್ವದ ಐತಿಹಾಸಿಕ ಆಧ್ಯಾತ್ಮಿಕ ಸ್ಥಳವಾಗಿದೆ. ಈ ಐತಿಹಾಸಿಕ ಮಹಾಬೋಧಿ ವಿಹಾರವನ್ನು, ಬುದ್ದಿಸ್ಟ್ ಟೆಂಪಲ್ ಮಹಾಭೋದಿ ಕಮಿಟಿ ಎಂಬ ಸಂಸ್ಥೆ, 1949 ನಿಯಮದಂತೆ ಬೌದ್ಧರ ಸುಪರ್ದಿಗೆ ವಹಿಸಬೇಕೆಂದು ದೇಶದ 8 ದಿಕ್ಕುಗಳಿಂದ ಬಿಕ್ಕು ಸಂಘದ ನೇತೃತ್ವದಲ್ಲಿ 5 ಲಕ್ಷ ಜನ ಭಾಗವಹಿಸಿ ಒತ್ತಾಯಿಸುತ್ತಿದ್ದೇವೆ ಎಂದರು.

ಭಾರತೀಯ ಬೌದ್ಧಮಹಾಸಭಾದ ಸುಮಾರು 25 ರಾಜ್ಯ ಶಾಖೆಯ ಪದಾಧಿಕಾರಿಗಳು ಈ ರ‌್ಯಾಲಿಯಲ್ಲಿ ಭಾಗವಹಿಸುತ್ತಿದ್ದಾರೆ. ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆಗಳಿಂದ ಬೌದ್ಧ ಅನುಯಾಯಿಗಳು ಭಾಗವಹಿಸುತ್ತಿದ್ದಾರೆ. ಜಿಲ್ಲೆಯ ಪ್ರತಿನಿಧಿಯಾಗಿ ನಾವು ತೆರಳುತ್ತಿದ್ದೇವೆ ಎಂದರು.

ಈ ಸಂದರ್ಭದಲ್ಲಿ ಮಾತಾ ರಾಮಾಬಾಯಿ ಫೌಂಡೇಶನ್ ಅಧ್ಯಕ್ಷೆ ಪುಷ್ಪ ಮರಿಸ್ವಾಮಿ, ವಕೀಲರಾದ ರಾಮಸಮುದ್ರ ನಾಗಣ್ಣ, ನಿವೃತ್ತ ಅಧಿಕಾರಿ ಮಹದೇವಯ್ಯ, ಬಿಎಸ್‌ಐ ತಾಲೂಕು ಖಜಾಂಚಿ ಪ್ರಕಾಶ್, ರವಿಕುಮಾರ್, ಮಧುಕುಮಾರ್, ಕುಮಾರಸ್ವಾಮಿ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net