

ಚಾಮರಾಜನಗರ : ನಗರದ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತೆ ಕೌನ್ಸಿಲ್ ಕಮಿಟಿ(ನ್ಯಾಕ್) ಮಾನದಂಡವಾರು 2.28 ಪಾಯಿಂಟ್‌ನೊಂದಿಗೆ ‘ಬಿ’ ಗ್ರೇಡ್ ನೀಡಿದೆ.
ನಗರದ ಬಿ.ರಾಚಯ್ಯ ಜೋಡಿ ರಸ್ತೆಯಲ್ಲಿರುವ ಕಾಲೇಜಿಗೆ ಜು.13 ಮತ್ತು 14 ರಂದು ತಮಿಳುನಾಡಿನ ವೆಂಕಟಾಚಲಂ, ಹರಿಯಾಣದ ಸ್ವಾರಿಕಾ ಶರ್ಮ ಹಾಗೂ ಕೇರಳ ರಾಜ್ಯದ ಸೀನಾಜಾರ್ಜ್ ಒಳಗೊಂಡ ನ್ಯಾಕ್ ಪೀರ್ ಕಮಿಟಿ ಕಾಲೇಜಿಗೆ ಭೇಟಿ ನೀಡಿತ್ತು.
ಕಾಲೇಜಿನ ಶೈಕ್ಷಣಿಕ ಗುಣಮಟ್ಟ ಕುರಿತು ಸಮಗ್ರವಾಗಿ ಪರಶೀಲನೆ ನಡೆಸಿತ್ತು. ಕಳೆದ 5 ವರ್ಷಗಳಲ್ಲಿನ ಕಾಲೇಜಿನ ಶೈಕ್ಷಣಿಕ ವರದಿ, ಲಿತಾಂಶ ಕುರಿತಾದ ಮಾಹಿತಿ, ಕಾಲೇಜು ಕಟ್ಟಡದ ವೀಕ್ಷಣೆ, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಜತೆಗೆ ಚರ್ಚೆ, ಉತ್ತಮ ಸಮಾಜ ನಿರ್ಮಾಣದಲ್ಲಿ ಕಾಲೇಜಿನ ಪಾತ್ರದ ಕುರಿತಾದ ಸಮಗ್ರ ಮಾಹಿತಿ ಕಲೆ ಹಾಕಿದ್ದರು.
ಕಾಲೇಜಿನ ಪಠ್ಯಕ್ರಮದ ಅಂಶಗಳು, ಬೋಧನೆ-ಕಲಿಕೆ ಮತ್ತು ಮೌಲ್ಯಮಾಪನ, ಸಂಶೋಧನೆ- ನಾವೀನ್ಯತೆ ಮತ್ತು ವಿಸ್ತರಣೆ, ಮೂಲಸೌಕರ್ಯ ಮತ್ತು ಕಲಿಕೆಯ ಸಂಪನ್ಮೂಲ, ವಿದ್ಯಾರ್ಥಿ ಬೆಂಬಲ ಮತ್ತು ಪ್ರಗತಿ, ಕಾಲೇಜಿನ ಆಡಳಿತ-ನಾಯಕತ್ವ ಮತ್ತು ನಿರ್ವಹಣೆ, ಸಾಂಸ್ಥಿಕ ಮೌಲ್ಯಗಳು ಮತ್ತು ಉತ್ತಮ ಅಭ್ಯಾಸಗಳ ಮಾನದಂಡದ ಆಧಾರದಲ್ಲಿ ತೂಕ, ಮಾನದಂಡವಾರು ತೂಕದ ಗ್ರೇಡ್ ಪಾಯಿಂಟ್ ಹಾಗೂ ಸರಾಸರಿ ಪಾಯಿಂಟ್‌ಗಳನ್ನು ಕಮಿಟಿ ನೀಡಿದೆ. ಒಟ್ಟಾರೆ ಮಹಿಳಾ ಪ್ರಥಮ ದರ್ಜೆ ಕಾಲೇಜಿಗೆ 2283 ಗ್ರೇಡ್ ಪಾಯಿಂಟ್ ನೀಡಿದ್ದು, ಕಾಲೇಜು ಆರಂಭಗೊಂಡು 5 ವರ್ಷಗಳಾದ ಬಳಿಕ ಇದೇ ಮೊದಲ ಬಾರಿಗೆ ಭೇಟಿ ನೀಡಿದ್ದ ನ್ಯಾಕ್ ಕಮಿಟಿಯಿಂದ ಬಿ ಗ್ರೇಡ್ ೋಷಣೆ ಮಾಡಲಾಗಿದೆ.