19 ರಿಂದ 22ರವರೆಗೆ ದಸರಾ ಕ್ರೀಡಾಕೂಟ ಆಯ್ಕೆ ಪ್ರಕ್ರಿಯೆ

Published on

ಚಾಮರಾಜನಗರ: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ 2024-25ನೇ ಸಾಲಿನ ತಾಲೂಕುಮಟ್ಟದ ದಸರಾ ಕ್ರೀಡಾಕೂಟ ಸ್ಪರ್ಧೆಗಳ ಆಯ್ಕೆ ಪ್ರಕ್ರಿಯೆಯನ್ನು ಸೆ.19 ರಿಂದ 22ರವರೆಗೆ ಜಿಲ್ಲೆಯ ಐದು ತಾಲೂಕುಗಳಲ್ಲಿ ಹಮ್ಮಿಕೊಳ್ಳಲಾಗಿದೆ.

ಸೆ. 19ರಂದು ಹನೂರಿನ ಶ್ರೀಮಲೆ ಮಹದೇಶ್ವರ ತಾಲೂಕು ಕ್ರೀಡಾಂಗಣದಲ್ಲಿ, 20ರಂದು ಚಾಮರಾಜನಗರ ಡಾ.ಬಿ.ಆರ್.ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣ ಹಾಗೂ ಗುಂಡ್ಲುಪೇಟೆ ಡಿ.ದೇವರಾಜ ಅರಸು ಕ್ರೀಡಾಂಗಣ, 21ರಂದು ಕೊಳ್ಳೇಗಾಲ ತಾಲೂಕು ಕ್ರೀಡಾಂಗಣ ಹಾಗೂ ಯಳಂದೂರಿನ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ವಾಲಿಬಾಲ್, ಕಬಡ್ಡಿ, ಖೋ-ಖೋ, ಥ್ರೋಬಾಲ್ ಹಾಗೂ ಯೋಗ ಸ್ಪರ್ಧೆಗಳು ನಡೆಯಲಿವೆ. ಸೆ. 22ರಂದು ಯಳಂದೂರಿನ ಅಥ್ಲೆಟಿಕ್ಸ್ ಮತ್ತು ಫುಟ್‌ಬಾಲ್ ಕ್ರೀಡೆಗಳನ್ನು ಕೊಳ್ಳೇಗಾಲ ತಾಲೂಕು ಕ್ರೀಡಾಂಗಣದಲ್ಲಿ ನಡೆಸಲಾಗುವುದು.

ಕ್ರೀಡಾಕೂಟದಲ್ಲಿ ಭಾಗವಹಿಸಲು ಸ್ಪರ್ಧಿಗಳು ಆಯಾ ತಾಲೂಕು ಕ್ರೀಡಾಂಗಣಗಳಲ್ಲಿ ನಿಗಧಿತ ದಿನದಂದು ಬೆಳಗ್ಗೆ 9ಗಂಟೆಗೆ ಸಂಘಟಕರಲ್ಲಿ ಹೆಸರುಗಳನ್ನು ನೋಂದಾಯಿಸಿಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ನಗರದ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ದೂ.ಸಂ 08226-224932 ಅಥವಾ ಮೊ.ನಂ 9916466659, 9945615695 ಸಂಪರ್ಕಿಸಬಹುದು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net