ಬೆಳೆ ಸಮೀಕ್ಷೆಗಾರರಿಂದ ಮನವಿ ಸಲ್ಲಿಕೆ

19raju7
Published on

ಚಾಮರಾಜನಗರ : ಬೆಳೆ ಸಮೀಕ್ಷೆಗಾರರ ಕೆಲಸವನ್ನು ಮಾಸಿಕ ವೇತನದೊಂದಿಗೆ ಕಾಯಂಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಜಿಲಾಧಿಕಾರಿ ಶಿಲ್ಪಾನಾಗ್ ಅವರಿಗೆ ಬೆಳೆ ಸಮೀಕ್ಷೆಗಾರರು ಮನವಿ ಸಲ್ಲಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ಮನವಿ ಪತ್ರ ಸಲ್ಲಿಸಿದ ಬೆಳೆ ಸಮೀಕ್ಷೆದಾರರು, ಸುಮಾರು 5 ವರ್ಷಗಳಿಂದ ಈ ಕೆಲಸವನ್ನು ನಿರ್ವಹಿಸಿಕೊಂಡು ಬಂದಿದ್ದು, 2019ರಿಂದಲೂ ಪ್ರತಿ ಪ್ಲಾಟ್‌ಗೆ 10 ರೂ.ಗಳಿದ್ದೂ ಇಲ್ಲಿಯವರೆಗೂ ಯಾವುದೇ ಬದಲಾವಣೆಯಾಗಿಲ್ಲ. ಆದ್ದರಿಂದ ಪಿ.ಆರ್ ಕೆಲಸವನ್ನು ಮಾಸಿಕ ವೇತನದೊಂದಿಗೆ ಕಾಯಂಗೊಳಿಸುವುದು, ಸಾಮಾಜಿಕ ಭದ್ರತೆ ಮತ್ತು ಆರೋಗ್ಯ ಭದ್ರತೆ ಒದಗಿಸುವುದು, ಪ್ರತಿ ಪ್ಲಾಟ್‌ಗೆ 30 ರೂ. ಗಳಿಗೆ ಹೆಚ್ಚಿಸುವುದು, ಐಡಿ ಕಾರ್ಡ್ ವಿತರಣೆ ಮಾಡುವುದು ಹಾಗೂ ಹೊಸ ವರ್ಷನ್ ಆ್ಯಪ್ ತೆಗೆದು ಹಾಕುವ ಮನವಿ ಪತ್ರವನ್ನು ಸಲ್ಲಿಸಿದರು.

ಸೋಮಶೇಖರ್, ನಾಗೇಂದ್ರ ಪ್ರಸಾದ್, ಸಿ.ಮೋಹನ್ ಕುಮಾರ್, ನಾಗೇಶ್, ಮಹೇಶ್, ರವಿ, ಲಿಂಗರಾಜು, ಮಂಜು, ಕೆಂಪರಾಜು, ಮಹದೇವಸ್ವಾಮಿ, ಮಂಜುನಾಥ್ ಇತರರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net