ಕಸ ಸುರಿಯುತ್ತಿದ್ದ ಕೇರಳದ ಚಾಲಕನಿಗೆ ದಂಡ

12-GPT-4
Published on

ಗುಂಡ್ಲುಪೇಟೆ: ಪಟ್ಟಣದ ಹೊರ ವಲಯದಲ್ಲಿ ಕೇರಳದ ತ್ಯಾಜ್ಯತಂದು ಸುರಿಯುತ್ತಿದ್ದ ವಾಹನ ಚಾಲಕನಿಗೆ ಪುರಸಭೆ ಅಧಿಕಾರಿಗಳು ದಂಡ ವಿಧಿಸಿದ್ದಾರೆ.

ಪುರಸಭೆಗೆ ಸೇರಿದ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಬುಧವಾರ ಸಂಜೆ ಕೇರಳದಿಂದ ತಂದ ತ್ಯಾಜ್ಯ ಸುರಿಯುತ್ತಿದ್ದ ವೇಳೆ ಐಷರ್ ವಾಹನ ಚಾಲಕ ಸಿಕ್ಕಿಬಿದಿದ್ದಾನೆ. ಹಿಂದಿನಿಂದಲೂ ಕೇರಳಕ್ಕೆ ಸರಕು ಸಾಗಣೆ ಮಾಡಿ ವಾಪಸಾಗುವಾಗ ಅಲ್ಲಿಂದ ತಂದ ತ್ಯಾಜ್ಯವನ್ನು ತಂದು ಪುರಸಭೆ ತ್ಯಾಜ್ಯ ವಿಲೇವಾರಿ ಘಟಕದ ಬಳಿಯಲ್ಲಿ ಸುರಿಯುತ್ತಿದ್ದುದಾಗಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ. ಈ ಹಿನ್ನೆಲೆಯಲ್ಲಿ ಪುರಸಭೆಯ ಅಧಿಕಾರಿಗಳು ಚಾಲಕನಿಗೆ 5 ಸಾವಿರ ರೂ. ದಂಡ ವಿಧಿಸಿ ಮುಂದೆ ಹೀಗೆ ಮಾಡದಂತೆ ಎಚ್ಚರಿಕೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net