

ಚಾಮರಾಜನಗರ: ನಗರದ ಜಿಲ್ಲಾಡಳಿತ ಭವನದಲ್ಲಿರುವ ಕಚೇರಿಯಲ್ಲಿ ವಿಧಾನ ಪರಿಷತ್ತಿನ ಸದಸ್ಯ ಡಾ.ಡಿ.ತಿಮ್ಮಯ್ಯ ಸಾರ್ವಜನಿಕರು ಮತ್ತು ಮುಖಂಡರಿಂದ ಶುಕ್ರವಾರ ಕುಂದು-ಕೊರತೆಗಳ ಅರ್ಜಿ ಸ್ವೀಕಾರ ಮಾಡಿದರು. ಮುಖಂಡರಾದ ಕಾಗಲವಾಡಿ ಚಂದ್ರು, ಎಂ.ಶಿವಮೂರ್ತಿ, ಬಾಲರಾಜು, ನಿಟ್ರೆ ಮಹದೇವು, ಜಯಶಂಕರ್, ಗ್ರಾಪಂ ಸದಸ್ಯ ಗೋವಿಂದ ಹಾಲಹಳ್ಳಿ, ಮಹದೇವಯ್ಯ, ಲಿಂಗರಾಜು ಸವನಪುರ ಮತ್ತು ಇತರರು ಇದ್ದರು.