ತುರ್ತು ಸಭೆ ಕರೆಯಲು ಒತ್ತಾಯ

12rajesh8
Published on

ಚಾಮರಾಜನಗರ: ನಗರಸಭೆಯಲ್ಲಿ ತುರ್ತು ಸಭೆ ಕರೆಯಬೇಕೆಂದು ಒತ್ತಾಯಿಸಿ ನೂತನ ಅಧ್ಯಕ್ಷ ಎಸ್.ಸುರೇಶ್‌ಗೆ ಎಸ್‌ಡಿಪಿಐ ಪಕ್ಷದ ಸದಸ್ಯರು ಗುರುವಾರ ಮನವಿ ಸಲ್ಲಿಸಿದರು.

ನಗರಸಭೆ ಅಧ್ಯಕ್ಷರ ಕಚೇರಿಯಲ್ಲಿ ಭೇಟಿ ಮಾಡಿದ ಸದಸ್ಯರು, ನಗರಸಭೆ ವ್ಯಾಪ್ತಿಯಲ್ಲಿ ಮೂಲಸೌಕರ್ಯಗಳ ಕೊರತೆ ಕಾಡುತ್ತಿದೆ. ಅದರಲ್ಲೂ ವಿಶೇಷವಾಗಿ ಕಸದ ವಿಲೇವಾರಿ ಮತ್ತು ಸಮರ್ಪಕ ಕುಡಿಯುವ ನೀರಿನ ಪೂರೈಕೆಯಾಗುತ್ತಿಲ್ಲ. ಕಳೆದ ಸುಮಾರು ಒಂದುವರೆ ವರ್ಷದಿಂದ ಅಧ್ಯಕ್ಷರು-ಉಪಾಧ್ಯಕ್ಷರು ಇಲ್ಲದೆ ಕೆಲಸ ಕಾರ್ಯಗಳು ಆಗಿಲ್ಲ.ಆದ್ದರಿಂದ ಸಾರ್ವಜನಿಕರ ಹಿತದೃಷ್ಟಿಯಿಂದ ತುರ್ತು ಸಭೆ ಕರೆಯಬೇಕೆಂದು ಮನವಿ ಮಾಡಿದರು. ನಗರಸಭೆ ಸದಸ್ಯರಾದ ಮೊಹಮ್ಮದ್ ಅಮಿಕ್, ಖಲೀಲ್‌ಉಲ್ಲಾ, ಅಬ್ರಾರ್ ಅಹಮದ್, ಮಹೇಶ್ ಗಾಳೀಪುರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net