ಪ್ರಧಾನ ಮಂತ್ರಿ ಸುರಕ್ಷಾ ಯೋಜನೆ ಸಹಕಾರಿ

Published on

ಚಾಮರಾಜನಗರ: ಕೇಂದ್ರ ಸರ್ಕಾರವು ಆಪತ್ಕಾಲದಲ್ಲಿ ಆರ್ಥಿಕವಾಗಿ ನೆರವಾಗಲೆಂದು ಪ್ರಧಾನ ಮಂತ್ರಿ ಸುರಕ್ಷಾ ಮತ್ತು ಪ್ರಧಾನ ಮಂತ್ರಿ ಜೀವನಜ್ಯೋತಿವಿಮಾ ಯೋಜನೆ ಜಾರಿಗೆ ತಂದಿದ್ದು, ಸಾರ್ವಜನಿಕರಿಗೆ ಸಹಕಾರಿಯಾಗಿದೆ ಎಂದು ಇಂಟಿಗ್ರಾ ಕಂಪನಿಯ ಜಿಲ್ಲಾ ಸಂಯೋಜಕ ಸಿದ್ದರಾಜು ಹೇಳಿದರು.

ತಾಲೂಕಿನ ಹೊಂಗನೂರು ಗ್ರಾಮದಲ್ಲಿರುವ ಭಾರತೀಯ ಸ್ಟೇಟ್ ಬ್ಯಾಂಕಿನ ಅವರಣದಲ್ಲಿ ಇತ್ತೇಚೆಗೆ ಪ್ರಧಾನ ಮಂತ್ರಿ ಜೀವನಜ್ಯೋತಿವಿಮಾ ಯೋಜನೆಯ ಫಲಾನುಭಾವಿಯಾದ ಆಕಾಲಿಕ ಮರಣಕ್ಕಿಡಾದ ಮಹದೇವ ಅವರ ಪತ್ನಿಗೆ ಚೆಕ್ ವಿತರಿಸಿ ಮಾತನಾಡಿದರು.

ಈ ಯೋಜನೆಯು ಸಮಾಜದ ಎಲ್ಲಾ ವರ್ಗದವರಿಗೊ ಅನ್ವಯವಾಗಲಿದ್ದು, ಪ್ರಧಾನ ಮಂತ್ರಿ ಸುರಕ್ಷಾ ವಿಮಾ ಯೋಜನೆಯಡಿ ವಾರ್ಷಕ 20 ರೂ, ಗಳಲ್ಲಿ 2 ಲಕ್ಷ ರೂ.ಗಳ ದುರ್ಘಟನೆ ವಿಮೆಗೆ ಒಳಗಾಬಹುದು. ಇದಕ್ಕೆ 18ವರ್ಷದ ಮೇಲ್ಪಟ್ಟ 70ವರ್ಷದ ಒಳಗಿನ ಮಹಿಳಾ ಮತ್ತು ಪುರಷರು ಅರ್ಹರಾಗಿರುತ್ತಾರೆ. ಹಾಗೆಯೆ ಪ್ರಧಾನ ಮಂತ್ರಿ ಜೀವನಜ್ಯೋತಿವಿಮಾ ಯೋಜನೆಯಡಿ 342 ರೂಗಳಲ್ಲಿ 2 ಲಕ್ಷ ರೂ, ಗಳ ಜೀವವಿಮೆಯನ್ನು ಪ್ರತಿಯೊಬ್ಬ 18ವರ್ಷದಿಂದ 50ವರ್ಷದ ಮಹಿಳಾ ಮತ್ತು ಪುರಷರು ವಿಮೆಗೆ ಅರ್ಹರಾಗಿರುತ್ತಾರೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸ್ಟೇಟ್ ಬ್ಯಾಂಕಿನ ವ್ಯವಸ್ಥಾಪಕ ಅವನೀಶ್ ಕುಮಾರ್ ಪಾಠಕ್, ಕ್ಯಾಷಿಯರ್ ರಾಹುಲ್ ನಾಯಕ್, ಇಂಟಿಗ್ರಾ ಕಂಪನಿಯ ಮೇಲ್ವೀಚಾರಕ ಬಸವನಾಯಕ, ಭಾರತೀಯ ಸ್ಟೇಟ್ ಬ್ಯಾಂಕಿನ ವ್ಯವಹಾರ ಪ್ರತಿನಿಧಿಯಾದ ಸುನಿಲ್, ಆಲೂರು ನಾಗೇಂದ್ರಮೂರ್ತಿ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net