ರೋಟರಿ ಪದಾಧಿಕಾರಿಗಳ ಪದಗ್ರಹಣ

18kglphoto-1
Published on

ಕೊಳ್ಳೇಗಾಲ: ಪಟ್ಟಣದ ಚೌಡೇಶ್ವರಿ ಕಲ್ಯಾಣ ಮಂಟಪದಲ್ಲಿ ಭಾನುವಾರ ರೋಟರಿ ಸಂಸ್ಥೆಯ ನೂತನ ಪದಾಧಿಕಾರಿಗಳ ಪದವಿ ಪದಗ್ರಹಣ ಕಾರ್ಯಕ್ರಮ ಆಯೋಜಿಸಲಾಗಿತ್ತು. ಅಧ್ಯಕ್ಷರಾಗಿ ಎಸ್.ನಂಜುಂಡಸ್ವಾಮಿ (ನಂದೀಶ್) ಹಾಗೂ ಕಾರ್ಯದರ್ಶಿಯಾಗಿ ಜೆ.ಕುಮಾರಸ್ವಾಮಿ ಅಧಿಕಾರ ಸ್ವೀಕಾರ ಮಾಡಿದರು.

ರೋಟರಿ ಜಿಲ್ಲೆ 3181ರ ಡಿಜಿಇ, ರೋ.ಪಿ.ಎಚ್.ಎಫ್ ವಿಕ್ರಂದತ್ತ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ರೋಟರಿ ಸಂಸ್ಥೆ ಪ್ರಪಂಚದಾದ್ಯಂತ ತನ್ನ ಸೇವಾ ಕಾರ್ಯವನ್ನು ನಡೆಸುತ್ತಿದ್ದು, ದುರ್ಬಲ ಹಾಗೂ ಬಡವರ ಏಳಿಗೆಗೆ ಸೇವೆ ಸಲ್ಲಿಸುವ ಉದ್ದೇಶ ಹೊಂದಿದೆ ಎಂದರು.

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ಶ್ರೀಜಾ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ಹರ್ಷಿತಾ, ಜೆಇಇ ಪರೀಕ್ಷೆಯಲ್ಲಿ 195ನೇ ರ‌್ಯಾಂಕ್ ಪಡೆದ ರಮಿತಾಗೌಡ, ಅಂಗನವಾಡಿ ಕೇಂದ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಶಾಂತಮ್ಮ, ಕೆಎಸ್‌ಆರ್‌ಟಿಸಿಯ ಅಪಘಾತ ರಹಿತ ಚಾಲಕ ಎಂ.ಲಿಂಗರಾಜು ಹಾಗೂ ಹನೂರು ಶಾಲೆಯ ಶಿಕ್ಷಕ ಮಹದೇವಪ್ರಸಾದ್ ಅವರನ್ನು ಸನ್ಮಾಸಲಾಯಿತು.

ರೋಟರಿ ಸಂಸ್ಥೆ ವಲಯ -9 ಸಹಾಯಕ ಗೌವರ್ನರ್ ರೋ.ಪಿಎಚ್‌ಎಫ್ ಪ್ರಕಾಶ್, ವಲಯ-9 ರೋ.ಪಿ.ಎಚ್‌ಎಫ್ ಬಸವರಾಜು, ಉಪಾಧ್ಯಕ್ಷ ಸರಸ್ವತಿ ಹೊನ್ನಪ್ಪ, ನಿರ್ಗಮಿತ ಅಧ್ಯಕ್ಷ ಕಿರಣ್ ಬಾಬು, ನಿರ್ಗಮಿತ ಕಾರ್ಯದರ್ಶಿ ಪ್ರವೀಣ್ ಹಾಗೂ ಮಾಜಿ ಶಾಸಕ ಎನ್.ಮಹೇಶ್, ಜಿ.ಎನ್.ನಂಜುಂಡಸ್ವಾಮಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net