ಶ್ರೀ ಭಾರತೀತೀರ್ಥ ಸ್ವಾಮೀಜಿ ವರ್ಧಂತಿ

28raju6
Published on

ಚಾಮರಾಜನಗರ: ಶೃಂಗೇರಿ ಶಂಕರ ಮಠದ ನಿರಂತರ ಸಂಪರ್ಕದಿಂದ ಚಾಮರಾಜನಗರದ ಪಟ್ಟಾಭಿರಾಮ ಮಂದಿರ ವಿಶೇಷ ಧಾರ್ಮಿಕ ಕ್ಷೇತ್ರವಾಗಿದೆ ಎಂದು ಮಂದಿರದ ಅಧ್ಯಕ್ಷ ಕೆ.ಬಾಲಸುಬ್ರಮಣ್ಯಂ ತಿಳಿಸಿದರು.


ನಗರದ ಅಗ್ರಹಾರದ ಬೀದಿಯಲ್ಲಿರುವ ಶ್ರೀಪಟ್ಟಾಭಿರಾಮ ಮಂದಿರದಲ್ಲಿ ಶ್ರೀಶೃಂಗೇರಿ ಜಗದ್ಗುರು ಶ್ರೀಭಾರತೀ ತೀರ್ಥ ಸ್ವಾಮೀಜಿ 75ನೇ ವರ್ಧಂತಿ ಉತ್ಸವದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಶೃಂಗೇರಿ ಜಗದ್ಗುರುಗಳ ಆಶೀರ್ವಾದದಿಂದ ರಾಮಮಂದಿರ ವಜ್ರಮಹೋತ್ಸವ ಆಚರಿಸಿಕೊಂಡಿದೆ. ಈ ಮಂದಿರಕ್ಕೆ ಗುರುಗಳು ಅನೇಕ ಬಾರಿ ಭೇಟಿ ನೀಡಿ ಭಕ್ತರನ್ನು ಆಶೀರ್ವದಿಸಿದ್ದಾರೆ. ಅವರ ವರ್ಧಂತಿಯನ್ನು ರಾಮಮಂದಿರದಲ್ಲಿ ಪ್ರತಿವರ್ಷವೂ ಆಚರಿಸಲಾಗುತ್ತಿದೆ ಎಂದರು.


ಕೊಳ್ಳೇಗಾಲ ಬ್ರಾಹ್ಮಣ ಸಂಘದ ಅಧ್ಯಕ್ಷ ಶೇಖರ ಶಾಸ್ತ್ರಿ ಮಾತನಾಡಿ, ಶೃಂಗೇರಿ ಧಾರ್ಮಿಕ ಕ್ಷೇತ್ರಕ್ಕೆ ಜಗದ್ಗುರುಗಳ ಕೊಡುಗೆ ಅಪಾರ. ಶಿಕ್ಷಣ ಕ್ಷೇತ್ರ, ವೇದಪಾಠ ಶಾಲೆ, ದೇಶದ ಮೂಲೆ ಮೂಲೆಗಳಲ್ಲಿ ಶೃಂಗೇರಿ ಮಠದ ಶಾಖೆ ಸ್ಥಾಪನೆ ಮಾಡಲಾಗಿದೆ ಎಂದು ಹೇಳಿದರು. ರಾಮಮಂದಿರದ ಉಪಾಧ್ಯಕ್ಷ ಲಕ್ಷ್ಮೀನರಸಿಂಹ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಗದ್ಗುರುಗಳ ಭಾವಚಿತ್ರಕ್ಕೆ ವೇದಬ್ರಹ್ಮ ಶ್ರೀಪಾಲಾಕ್ಷ ಭಾರದ್ವಾಜ್ ಪುಷ್ಪಾರ್ಚನೆ ಮಾಡಿದರು. ಹೆಬ್ಬಸೂರು ಶೃಂಗೇರಿ ಮಠದ ಕಿರಣ್ ಭಾಗವತ್, ಹರದನಹಳ್ಳಿ ಬಾಲಸುಬ್ರಮಣ್ಯ, ನಿರ್ಮಲಾ ನಾಗರಾಜು, ಶ್ರೀಧರ್, ನಾಗೇಂದ್ರ ಪ್ರಸಾದ್, ಶಾಂತಲಾ, ಕಾರ್ತಿಕ್ ಮತ್ತು ಕಿರಣ್ ಭಾರದ್ವಾಜ್ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net