ಜೀವ ವಿಮೆಯಿಂದ ಜೀವನ ಭದ್ರತೆ

Published on

ಚಾಮರಾಜನಗರ: ಜೀವ ವಿಮೆ ಮಾಡಿಸಿ ಜೀವನ ಭದ್ರತೆ ಹೊಂದಿರಿ ಎಂದು ಭಾರತೀಯ ಜೀವ ವಿಮಾನಿಗಮದ ಚಾಮರಾಜನಗರ ಶಾಖಾ ವ್ಯವಸ್ಥಾಪಕ ಕುಮಾರ್ ಕರೆ ನೀಡಿದರು.

ನಗರದ ಭಾರತೀಯ ಜೀವ ವಿಮಾನ ನಿಗಮ ಚಾಮರಾಜನಗರ ಶಾಖಾ ವತಿಯಿಂದ ವಿಮಾ ಸಪ್ತಾಹದ ಅಂಗವಾಗಿ ಇತ್ತೀಚಿಗೆ ಹಮ್ಮಿಕೊಂಡಿದ್ದ ವಿಮಾ ಯಾತ್ರೆಗೆ ಚಾಲನೆ ನೀಡಿ ಅವರು ಮಾತನಾಡಿದರು. ಎಲ್‌ಐಸಿ ನಮ್ಮ ದೇಶದ ಸಂಪತ್ತು, ನಾಗರಿಕರಿಗೆ ವಿಮೆ ರಕ್ಷಣೆ ನೀಡುತ್ತಾ ಕುಟುಂಬದ ರಕ್ಷಣೆಯನ್ನು ಮಾಡುತ್ತಾ ಬಂದಿದೆ. ಹಾಗೂ ಜನರ ಆದಾಯವನ್ನು ಹೆಚ್ಚಿಸುವಂತೆ ಕೆಲಸ ಮಾಡುತ್ತಿದೆ. ಎಲ್‌ಐಸಿಯಿಂದ ಸಾಕಷ್ಟು ಬಡನಜನರಿಗೆ ಅನುಕೂಲವಾಗಿದೆ. ಎಲ್‌ಐಸಿಯು ವಿಮೆಯಿಂದ ಅನೇಕ ಜನರು ಅನುಕೂಲವನ್ನು ಪಡೆದುಕೊಂಡಿದ್ದಾರೆ. ಎಲ್‌ಐಸಿಯು ಶ್ರೀಮಂತರಿಂದ ಕಡು ಬಡವರು ಸೇರಿದಂತೆ ಎಲ್ಲಾ ವರ್ಗದವರಿಗೂ ವಿಮೆ ರಕ್ಷಣೆ ನೀಡುತ್ತಾ ಬಂದಿದೆ ಎಂದು ಎಲ್‌ಐಸಿಯ ಮಹತ್ವವನ್ನು ವಿವರಿಸಿದರು.

ಪ್ರತಿನಿಧಿ ನಾಗರಾಜು ಕಾಡಹಳ್ಳಿ, ಉಪಶಾಖಾಧಿಕಾರಿ ಆರ್ ರಾಘವೇಂದ್ರ ಹಾಗೂ ವಿಮಾ ನೌಕರರ ಸಂಘದ ಅಧ್ಯಕ್ಷ ದೊರೆಸ್ವಾಮಿ, ಕಾರ್ಯದರ್ಶಿ ನೂತನ್ ಕುಮಾರ್, ಜೀವ ವಿಮಾ ಪ್ರತಿನಿಧಿ ಸಂಘದ ಅಧ್ಯಕ್ಷ ಶಿವಕುಮಾರಸ್ವಾಮಿ, ಕಾರ್ಯದರ್ಶಿ ನಾಗರಾಜ್, ಪ್ರತಿನಿಧಿಗಳಾದ ಮಲ್ಲೇಶ್, ಪ್ರಸಾದ್, ನಾಗರಾಜು, ಸಿಬ್ಬಂದಿಗಳಾದ ರಾಚಯ್ಯ, ವೆಂಕಟರಾಜು, ಆರೋಗ್ಯನಾಥ್, ಯೋಗೇಶ್, ಧನ್ಯ, ಅಭಿವೃದ್ಧಿ ಅಧಿಕಾರಿ ಲಿಂಗರಾಜು ಮತ್ತು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net