

ಚಾಮರಾಜನಗರ: ಗೌರಿ-ಗಣೇಶ ಹಬ್ಬದ ಪ್ರಯುಕ್ತ ನಗರದ ಜೈ ಭುವನೇಶ್ವರಿ ಕನ್ನಡ ಯುವ ವೇದಿಕೆ ವತಿಯಿಂದ ಕಾರ್ಮಿಕರಿಗೆ ಹೊಸ ಬಟ್ಟೆಗಳನ್ನು ಉಡುಗೊರೆಯಾಗಿ ನೀಡಲಾಯಿತು.
ನಗರದ ಶ್ರೀಭುವನೇಶ್ವರಿ ವೃತ್ತದ ಬಳಿ ಇರುವ ಹೋಟೇಲ್ ಶೃಂಗಾರ್‌ನಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರು, ಆಟೊ ಚಾಲಕರು ಮತ್ತು ಸೆಕ್ಯುರಿಟಿ ಗಾರ್ಡ್‌ಗಳಿಗೆ ವೇದಿಕೆಯ ಅಧ್ಯಕ್ಷ ಜಿ.ಬಂಗಾರು ಬಟ್ಟೆ ವಿತರಣೆ ಮಾಡಿದರು.
ಈ ವೇಳೆ ಮಾತನಾಡಿದ ಅವರು, ಕಾರ್ಮಿಕರು ವರ್ಷ ಪೂರ್ತಿ ದುಡಿಯುತ್ತಾರೆ. ಕೆಲವೊಂದು ಸಂದರ್ಭದಲ್ಲಿ ಹಬ್ಬದ ದಿನಗಳಲ್ಲೂ ಕೆಲಸ ಮಾಡುತ್ತಾರೆ. ಇಂತಹ ಶ್ರಮಜೀವಿಗಳಿಗೆ ಗೌರವ ಸಲ್ಲಿಸುವುದು, ಹಬ್ಬಹರಿದಿನಗಳು ಮತ್ತು ವಿಶೇಷ ದಿನಗಳಲ್ಲಿ ಸ್ಮರಿಸುವುದು ನಮ್ಮ ಕರ್ತವ್ಯ. ಹೀಗಾಗಿ ಗೌರಿ-ಗಣೇಶ ಹಬ್ಬ ದಿನ ಕಾರ್ಮಿಕರಿಗೆ ಹೊಸ ಬಟ್ಟೆ ನೀಡಿ ಶುಭಕೋರಲಾಗಿದೆ ಎಂದರು. ಜಿಲ್ಲಾ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಹಾಗೂ ಹೋಟೆಲ್ ಶೃಂಗಾರ್ ಮಾಲೀಕ ನಂದಪ್ಪ ಶೆಟ್ಟಿ, ಪತ್ರಕರ್ತರಾದ ದೇವನೂರು ಶ್ರೀನಿವಾಸ್‌ನಾಯಕ್, ಸುರೇಂದ್ರ, ಸಾಗರ್, ಹೋಟೇಲ್ ವ್ಯವಸ್ಥಾಪಕ ಸಿದ್ದರಾಜು, ಗಣೇಶ್, ಸಚಿನ್, ಮಹೇಶ್ ಮತ್ತು ಇತರರು ಹಾಜರಿದ್ದರು.