

ಚಾಮರಾಜನಗರ: ವಿಕಲಚೇತನರ ಹಾಗೂ ಹಿರಿಯ ನಾಗರಿಕ ಸಬಲೀಕರಣ ಇಲಾಖೆ ವತಿಯಿಂದ 2024-25ನೇ ಸಾಲಿನಲ್ಲಿ ಪ್ರಿಮೆಟ್ರಿಕ್ (ಮೆಟ್ರಿಕ್ ಪೂರ್ವ) ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿಶೇಷಚೇತನ ವಿದ್ಯಾರ್ಥಿಗಳಿಂದ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
ಎಸ್.ಎಸ್.ಪಿ ತಂತ್ರಾಂಶದ ವೆಬ್‌ಸೈಟ್ ಹಾಗೂ ಮೂಲಕ ನೋಂದಣಿ ಮಾಡಿಕೊಂಡು ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಅಂಗವಿಕಲರ ಹಾಗೂ ಹಿರಿಯ ನಾಗರಿಕ ಸಬಲೀಕರಣ ಇಲಾಖೆ (ದೂ.ಸಂ 08226-223688) ಹಾಗೂ ಚಾಮರಾಜನಗರ ಎಂ.ಆರ್.ಡಬ್ಲ್ಯೂ ರಾಜೇಶ್ (8073716208), ಕೊಳ್ಳೇಗಾಲ ಎಂ.ಆರ್.ಡಬ್ಲ್ಯೂ ಕವಿರತ್ನ (7892715408), ಗುಂಡ್ಲುಪೇಟೆ ಎಂ.ಆರ್.ಡಬ್ಲ್ಯೂ ಮಂಜುಳ (9742423332), ಯಳಂದೂರು ಎಂ.ಆರ್.ಡಬ್ಲ್ಯೂ ಮಹದೇವಮ್ಮ (9740164149) ಅವರನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.