ನಂಜುಂಡೇಶ್ವರ ದೇವಸ್ಥಾನದಲ್ಲಿ ಅನ್ನಸಂತರ್ಪಣೆ

03
Published on

ಚಾಮರಾಜನಗರದ : ಭೀಮನ ಅಮಾವಾಸ್ಯೆ ಅಂಗವಾಗಿ ತಾಲೂಕಿನ ಚಂದಕವಾಡಿ ಗ್ರಾಮದ ಶ್ರೀಪಾರ್ವತಿ ಸಮೇತ ಶ್ರೀಪ್ರಸನ್ನ ನಂಜುಂಡೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು.

ವಿಶೇಷ ಅರ್ಚನೆ, ಪಂಚಾಮೃತ ಅಭಿಷೇಕ, ಮಹಾಮಂಗಳಾರತಿ ಹಾಗೂ ಅನ್ನಸಂತರ್ಪಣೆ ನಡೆಯಿತು. ಗ್ರಾಮಗಳಿಂದ ಬರುವ ಭಕ್ತಾದಿಗಳಿಗೆ ಪೂಜಾ ಕಾರ್ಯದಲ್ಲಿ ಭಾಗವಹಿಸಲು ಎಲ್ಲ ವ್ಯವಸ್ಥೆಯನ್ನು ದೇವಸ್ಥಾನದ ಭಕ್ತ ಮಂಡಳಿ ವತಿಯಿಂದ ಮಾಡಲಾಗಿತ್ತು.
ಪೂಜೆಗೆ ಅಗಮಿಸಿದ ಪ್ರತಿಯೊಬ್ಬರಿಗೂ ಪ್ರಸಾದದ ವ್ಯವಸ್ಥೆ ಕಲ್ಪಿಸಲಾಗಿತ್ತು. ಹತ್ತು ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಭಾಗವಹಿಸಿ, ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು.

ಗ್ರಾಮದ ಎಲ್ಲ ಜನಾಂಗದ ಯಜಮಾನರು, ಮುಖಂಡರು, ದೇವಸ್ಥಾನದ ಸಮಿತಿಯ ಅಧ್ಯಕ್ಷ ಕಪನಿನಾಯಕ, ಕಾರ್ಯದರ್ಶಿ ಕೇಶವಮೂರ್ತಿ, ಖಜಾಂಚಿ ಎಳನೀರು ರಾಜಣ್ಣ, ರಾಜುನಾಯಕ, ಶಿವಾನಂಕರಪ್ಪ, ರಮೇಶ, ರವಿ, ಮುರುಳಿ ದಾಸೆಗೌಡ್ರು, ಎಳನೀರು ಮಾದಯ್ಯ ಸಿದ್ದಪ್ಪಾಜಿ, ಮಹಾದೇವಸ್ವಾಮಿ ವಿಷಕಂಠ ನಾಯಕ, ಗ್ರಾಮದ ಯಜಮಾನರುಗಳಾದ ಬಸವರಾಜುನಾಯಕ, ರಾಜೇಂದ್ರ, ಮಹಾದೇವಸ್ವಾಮಿ, ಕೆಂಪರಾಜು, ವೆಂಕಟೇಶ್, ಕುಮಾರ, ಭೋಜರಾಜು, ದ್ವಾರಕೀಶ್, ಜಯಶಂಕರ, ಪುಟ್ಟಸ್ವಾಮಿ, ನಾಗರಾಜು ಎಲೆಕ್ಟ್ರಿಕಲ್ ರಾಮು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net