ಕ್ರೀಡಾಕೂಟ, ಹಲವು ಬಹುಮಾನ ಪಡೆದ ವಿದ್ಯಾರ್ಥಿಗಳು

Published on

ಹನೂರು: ಪಟ್ಟಣದ ಶ್ರೀ ಮಲೆಮಹದೇಶ್ವರ ಕ್ರೀಡಾಂಗಣದಲ್ಲಿ 2 ದಿನಗಳ ಕಾಲ ನಡೆದ ಪ್ರೌಢಶಾಲಾ ವಿದ್ಯಾರ್ಥಿಗಳ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ವಿವಿಧ ಶಾಲೆಯ ವಿದ್ಯಾರ್ಥಿಗಳು ವಿವಿಧ ಕ್ರೀಡೆಗಳಲ್ಲಿ ಜಯಗಳಿಸಿದ್ದಾರೆ.

ಬಾಲಕರ ವಿಭಾಗದಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನದಂತೆ ಕ್ರಮವಾಗಿ 100 ಮೀ ಓಟದಲ್ಲಿ ಹನೂರಿನ ಜಿ.ವಿ ಗೌಡ ಶಾಲೆಯ ಮಹೇಂದ್ರ, ಮಂಗಲ ಸರ್ಕಾರಿ ಪ್ರೌಢಶಾಲೆಯ ನಿತೀನ್, 200 ಮೀನಲ್ಲಿ ಇದೇ ಶಾಲೆಯ ನಿತೀನ್, ಹನೂರಿನ ಜಿ.ವಿ ಗೌಡ ಶಾಲೆಯ ಮಹೇಂದ್ರ, 400 ಮೀನಲ್ಲಿ ಮಹದೇಶ್ವರ ಬೆಟ್ಟದ ಮಹದೇಶ್ವರ ಶಾಲೆಯ ರಕ್ಷಿತ್, ಮಾರ್ಟಳ್ಳಿ ಸೇಂಟ್ ಮೇರಿಸ್ ಶಾಲೆಯ ಆಕಾಶ್, 800 ಮೀ.ನಲ್ಲಿ ಪಿ.ಜಿ. ಪಾಳ್ಯ ನಿರ್ಮಲ ಶಾಲೆಯ ಪ್ರದೀಪ್‌ಕುಮಾರ್, ಸಂದನಪಾಳ್ಯದ ಸಂತ ಅಂತೋಣಿ ಶಾಲೆಯ ಸುರೇಶ್, 1500 ಮೀ.ನಲ್ಲಿ ಹೂಗ್ಯಂ ಮುರಾರ್ಜಿ ಶಾಲೆಯ ಸುದರ್ಶನ್, ಹನೂರಿನ ಜಿ.ವಿ ಗೌಡ ಶಾಲೆಯ ಮುತ್ತುರಾಜು ಹಾಗೂ 3000 ಮೀ.ನಲ್ಲಿ ಮಾರ್ಟಳ್ಳಿ ಸೇಂಟ್ ಮೇರಿಸ್‌ನ ಅಶ್ವಿನ್, ಜಿ.ವಿ ಗೌಡ ಶಾಲೆಯ ಮುತ್ತುರಾಜು ಜಯಗಳಿಸಿದ್ದಾರೆ.

ಹಾಗೆಯೇ, ತಟ್ಟೆ ಎಸೆತದಲ್ಲಿ ಕೌದಳ್ಳಿ ಸರ್ಕಾರಿ ಶಾಲೆಯ ದಿವಾಕರ್, ಸಂದನಪಾಳ್ಯ ಸಂತ ಅಂತೋಣಿ ಶಾಲೆಯ ಜಾಯ್‌ಸನ್, ಗುಂಡು ಎಸೆತದಲ್ಲಿ ಕೌದಳ್ಳಿ ಸರ್ಕಾರಿ ಶಾಲೆಯ ದಿವಾಕರ್, ಹನೂರಿನ ಕ್ರಿಸ್ತರಾಜ ಶಾಲೆಯ ಯೋಗೇಶ್ವರ್, ಭರ್ಜಿ ಎಸೆತದಲ್ಲಿ ಕೌದಳ್ಳಿ ಸರ್ಕಾರಿ ಶಾಲೆಯ ಬಸವರಾಜು, ಹನೂರಿನ ಮುರಾರ್ಜಿ ಶಾಲೆಯ ರಜತ್, ಉದ್ದ ಜಿಗಿತದಲ್ಲಿ ರಾಮಾಪುರ ಸರ್ಕಾರಿ ಶಾಲೆಯ ಶಕ್ತಿ, ಸೇಂಟ್ ಮೇರಿಸ್ ಶಾಲೆಯ ಆಕಾಶ್, ತ್ರಿವಿಧ ಜಿಗಿತದಲ್ಲಿ ಪಿ.ಜಿ. ಪಾಳ್ಯ ನಿರ್ಮಲ ಶಾಲೆಯ ಆಕಾಶ್, ಮಾರ್ಟಳ್ಳಿ ಸೇಂಟ್ ಮೇರಿಸ್ ಶಾಲೆಯ ದರ್ಶನ್ ಹಾಗೂ ಎತ್ತರ ಜಿಗಿತದಲ್ಲಿ ಮ.ಬೆಟ್ಟ ಮಹದೇಶ್ವರ ಶಾಲೆಯ ಲಿಖಿತ್‌ಕುಮಾರ್, ರಾಮಾಪುರ ಸರ್ಕಾರಿ ಶಾಲೆಯ ಶಕ್ತಿ ಕ್ರಮವಾಗಿ ಪ್ರಥಮ ಹಾಗೂ ದ್ವಿತೀಯ ಸ್ಥಾನವನ್ನು ಪಡೆದಿದ್ದಾರೆ. ಇನ್ನು 4100 ಮೀ ರಿಲೆಯಲ್ಲಿ ಮಾರ್ಟಳ್ಳಿ ಸೇಂಟ್ ಮೇರಿಸ್ ಪ್ರಥಮ, ಮಂಗಲ ಸರ್ಕಾರಿ ಪ್ರೌಢಶಾಲೆ ದ್ವಿತೀಯ ಸ್ಥಾನ ಪಡೆದಿದ್ದು, 4400 ಮೀ. ರಿಲೆಯಲ್ಲಿ ಹನೂರಿನ ಕ್ರಿಸ್ತರಾಜ ಶಾಲೆ ಪ್ರಥಮ ಹಾಗೂ ಹನೂರಿನ ಶ್ರೀ ವಿವೇಕಾನಂದ ಶಾಲೆ ದ್ವಿತೀಯ ಸ್ಥಾನವನ್ನು ಪಡೆದಿದೆ.

ಬಾಲಕಿಯರ ವಿಭಾಗ: 100 ಮೀ ಓಟದಲ್ಲಿ ಸಂದನಪಾಳ್ಯ ಸಂತ ಅಂತೋಣಿ ಶಾಲೆಯ ಮರ್ಲಿನ್, ಹನೂರಿನ ಕ್ರಿಸ್ತರಾಜ ಶಾಲೆಯ ದೇವಮ್ಮ, 200 ಮೀನಲ್ಲಿ ಸಂತ ಅಂತೋಣಿ ಶಾಲೆಯ ಮರ್ಲಿನ್, ಮಾರ್ಟಳ್ಳಿ ಸೇಂಟ್ ಮೇರಿಸ್ ಶಾಲೆಯ ವೈಶಾಲಿ, 400 ಮೀ.ನಲ್ಲಿ ಹನೂರಿನ ಕ್ರಿಸ್ತರಾಜ ಶಾಲೆಯ ಪ್ರಾರ್ಥನಾ, ಕೆಂಪಯ್ಯನಹಟ್ಟಿ ಸರ್ಕಾರಿ ಶಾಲೆಯ ನಿಶಾ, 800 ಮೀ.ನಲ್ಲಿ ಸೇಂಟ್ ಮೇರಿಸ್‌ನ ಜೀನಾ ಜೋಸ್ಲೀನ್, ಮಂಗಲ ಸರ್ಕಾರಿ ಶಾಲೆಯ ಪ್ರತಿಭಾ, 1500 ಮೀ.ನಲ್ಲಿ ಇದೇ ಶಾಲೆಯ ಪ್ರತಿಭಾ, ಮ.ಬೆಟ್ಟ ಮಹದೇಶ್ವರ ಶಾಲೆಯ ಯಶಸ್ವಿನಿ ಹಾಗೂ 3000 ಮೀ.ನಲ್ಲಿ ಮಂಗಲ ಶಾಲೆಯ ಪ್ರತಿಭಾ, ಮಹದೇಶ್ವರ ಶಾಲೆಯ ಮಂಜುಳಾ ಕ್ರಮವಾಗಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದಿದ್ದಾರೆ.

ತಟ್ಟೆ ಎಸೆತದಲ್ಲಿ ರಾಮಾಪುರ ಜೆಎಸ್‌ಎಸ್ ಶಾಲೆಯ ಸಂಧ್ಯಾ, ಕೌದಳ್ಳಿ ಸರ್ಕಾರಿ ಶಾಲೆಯ ರೇವತಿ, ಗುಂಡು ಎಸೆತದಲ್ಲಿ ಇದೇ ಶಾಲೆಯ ರೇವತಿ, ನಿರ್ಮಲ ಶಾಲೆಯ ಸಂಧ್ಯಾ, ಭರ್ಜಿ ಎಸೆತದಲ್ಲಿ ಕೌದಳ್ಳಿ ಸರ್ಕಾರಿ ಶಾಲೆಯ ಧನಲಕ್ಷ್ಮೀ, ಸೇಂಟ್ ಮೇರಿಸ್ ಶಾಲೆಯ ವೈಶಾಲಿ, ಉದ್ದ ಜಿಗಿತದಲ್ಲಿ ಸಂತ ಅಂತೋಣಿ ಶಾಲೆಯ ಪ್ರಿಯಾಂಕ, ಇದೆ ಶಾಲೆಯ ಮರ್ಲಿನ, ತ್ರಿವಿಧ ಜಿಗಿತದಲ್ಲಿ ಸೇಂಟ್ ಮೇರಿಸ್‌ನ ವರ್ಷ, ಇದೆ ಶಾಲೆಯ ದರ್ಶಿನಿ, ಎತ್ತರ ಜಿಗಿತದಲ್ಲಿ ಸೇಂಟ್ ಮೇರಿಸ್‌ನ ಫೆಲ್ಸಿ ಹಾಗೂ ರಾಮಾಪುರ ಜೆಎಸ್‌ಎಸ್ ಶಾಲೆಯ ಗಂಗ್ರೋತ್ರಿ ಕ್ರಮವಾಗಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದಿದ್ದಾರೆ. ಇನ್ನು 4100 ಮೀ. ರಿಲೆಯಲ್ಲಿ ಸಂದನಪಾಳ್ಯ ಸಂತ ಅಂತೋಣಿ ಶಾಲೆ ಪ್ರಥಮ, ಹನೂರಿನ ಕ್ರಿಸ್ತರಾಜ ಶಾಲೆ ದ್ವಿತೀಯ, 4400 ಮೀ. ರಿಲೆಯಲ್ಲಿ ಮ.ಬೆಟ್ಟದ ಮಹದೇಶ್ವರ ಶಾಲೆ ಪ್ರಥಮ ಹಾಗೂ ಹನೂರಿನ ಜಿ.ವಿ ಗೌಡ ಶಾಲೆ ದ್ವ್ವಿತೀಯ ಸ್ಥಾನವನ್ನು ಪಡೆದಿದೆ ಎಂದು ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಮಹದೇವ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net