

ಚಾಮರಾಜನಗರ: ತಾಲೂಕಿನ ಕಬ್ಬಳ್ಳಿ ಗ್ರಾಮದಲ್ಲಿ ಕೃಷಿ ಮಹಾವಿದ್ಯಾಲಯದ ಅಂತಿಮ ಬಿಎಸ್ಸಿ ಕೃಷಿ ವಿದ್ಯಾರ್ಥಿಗಳು ಶನಿವಾರ ಮಣ್ಣಿನ ಮಾದರಿ ತೆಗೆಯುವ ಪ್ರಾತ್ಯಕ್ಷಿಕೆ ಕಾರ್ಯಕ್ರಮ ನಡೆಸಿಕೊಟ್ಟರು.
ಕೃಷಿ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿಗಳು ಮಣ್ಣಿನ ಮಾದರಿ ತೆಗೆಯುವ ವಿಧಾನ ತೋರಿಸಿದರು. ಸರಿಯಾದ ಸಂಗ್ರಹಣೆ ಮತ್ತು ಪ್ರಯೋಗಾಲಯಕ್ಕೆ ತಲುಪಿಸುವ ಪ್ರಕ್ರಿಯೆಗಳನ್ನು ವಿವರಿಸಿದರು. ಗ್ರಾಮೀಣ ಕೃಷಿ ಕಾರ್ಯಾನುಭವದ ಶಿಬಿರಾರ್ಥಿ ಅಶೋಕ ಮತ್ತು ಅವರ ತಂಡ ಮಣ್ಣಿನ ಮಾದರಿ ತೆಗೆಯುವ ವೇಳೆ ಪರಿಗಣಿಸಬೇಕಾದ ಮುಖ್ಯ ಕ್ರಮಗಳು ಮತ್ತು ಅದರ ಪ್ರಾಮುಖ್ಯತೆಯನ್ನು ಪ್ರದರ್ಶಿಸಿದರು. ಗ್ರಾಮದ ರೈತರು ಸಹ ಪ್ರಾತ್ಯಕ್ಷಿಕೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು, ಮಣ್ಣಿನ ಮಾದರಿ ತೆಗೆಯುವ ಪ್ರಕ್ರಿಯೆ ಅನುಸರಿಸಿದರು.