ಶಾಂತಿ, ಸೌಹಾರ್ದತೆಯಿಂದ ಹಬ್ಬ ಆಚರಿಸಿ

Published on

ಯಳಂದೂರು: ಸಮೀಪದ ಸಂತೇಮರಹಳ್ಳಿ ಪೊಲೀಸ್ ಠಾಣೆಯಲ್ಲಿ ಇತ್ತೀಚೆಗೆ ಗೌರಿ-ಗಣೇಶ ಹಾಗೂ ಈದ್ ಮಿಲಾದ್ ಹಬ್ಬದ ಸಂಬಂಧ ಶಾಂತಿ ಸಭೆ ನಡೆಸಲಾಯಿತು.

ಪಿಎಸ್‌ಐ ತಾಜುದ್ದೀನ್ ಮಾತನಾಡಿ, ಮುಂಬರುವ ದಿನಗಳಲ್ಲಿ ಹಿಂದು, ಮುಸ್ಲಿಂ ಸಮುದಾಯದ ಹಬ್ಬಗಳು ಬರಲಿವೆ. ಎಲ್ಲರೂ ಶಾಂತಿ ಹಾಗೂ ಸೌಹಾರ್ದತೆಯ ಮೂಲಕ ಯಾವುದೇ ಗೊಂದಲಗಳಿಗೂ ಆಸ್ಪದ ನೀಡದೆ ಹಬ್ಬವನ್ನು ಆಚರಿಸಬೇಕು. ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗದ ರೀತಿಯಲ್ಲಿ ಅನೂನ್ಯತೆಯಿಂದ ತಮ್ಮ ಹಬ್ಬಗಳನ್ನು ಆಚರಿಸಿಕೊಳ್ಳಬೇಕು ಎಂದು ತಿಳಿಸಿದರು.

ಗೌರಿ, ಗಣೇಶ ಹಬ್ಬದ ಸಂಬಂಧ ಗಣೇಶ ಪ್ರತಿಷ್ಠಾಪನೆಗೆ ಗ್ರಾಮ ಪಂಚಾಯಿತಿ ಅನುಮತಿ ಕಡ್ಡಾಯವಾಗಿದೆ. ಅಗ್ನಿಶಾಮಕ ಠಾಣೆಯ ಅನುಮತಿ, ಕೆಇಬಿ ಇಲಾಖೆಯ ಅನುಮತಿ, ಧ್ವನಿವರ್ಧಕ ಅಳವಡಿಸಲು ಅನುಮತಿ, ತಹಸೀಲ್ದಾರ್ ಅನುಮತಿ ಹಾಗೂ ಪೊಲೀಸ್ ಇಲಾಖೆಯ ಅನುಮತಿಯನ್ನು ಕಡ್ಡಾಯವಾಗಿ ಪಡೆದುಕೊಳ್ಳಬೇಕು. ಇಲಾಖೆಗಳು ನೀಡುವ ಸೂಚನೆಯನ್ನು ಕಡ್ಡಾಯವಾಗಿ ಪಾಲಿಸಬೇಕು. ಗಣಪತಿ ವಿಸರ್ಜನೆಯ ಸಂದರ್ಭದಲ್ಲಿಯೂ ಇಲಾಖೆಗೆ ಮಾಹಿತಿ ನೀಡಬೇಕು. ಯಾವುದೇ ಕಾರಣಕ್ಕೂ ಡಿಜೆಗಳನ್ನು ಬಳಸಬಾರದೆಂದು ಸೂಚನೆ ನೀಡಿದರು.

ತನಿಖಾ ವಿಭಾಗದ ಪಿಎಸ್‌ಐ ಚಂದ್ರಶೇಖರ್, ಎಸ್ಸೈ ನಾಗರಾಜು, ಗಿರೀಶ್, ಸಿಬ್ಬಂದಿ ಸುಂದರಪ್ಪ, ರಮೇಶ್ ಉಮೇಶ್, ಶಿವಕುಮಾರ್, ದಸಂಸ ಜಿಲ್ಲಾ ಅಧ್ಯಕ್ಷ ಕೆ.ಎಂ.ನಾಗರಾಜು, ಚಾಮುಲ್ ನಿರ್ದೇಶಕ ಕಮರವಾಡಿ ರೇವಣ್ಣ, ಗ್ರಾಪಂ ಸದಸ್ಯರಾದ ಶಂಕರಪ್ಪ, ಪುರುಷೋತ್ತಮ್, ಹೆಗ್ಗವಾಡಿಪುರ ಮಾದೇಶ್, ದೇಶವಳ್ಳಿ ಜಬಿವುಲ್ಲಾ, ಮುನಾವರ್ ಪಾಷ, ನಾಗೇಂದ್ರ ಕುಮಾರ್, ಪುನೀತ್ ಮಂಗಲ, ರಮೇಶ್ ಗೂಳಿಪುರ, ಜಡೇಸ್ವಾಮಿ ಮುಂತಾದವರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net