ಮಣ್ಣಿನ ಆರೋಗ್ಯಕ್ಕಾಗಿ ಸಾವಯವ ಕೃಷಿ ಸಹಕಾರಿ

04rajesh11
Published on

ಚಾಮರಾಜನಗರ: ಆಧುನಿಕ ಕೃಷಿಯಲ್ಲಿ ರಾಸಾಯನಿಕದಿಂದಲೇ ಬೆಳೆ ಬೆಳೆಯುತ್ತಿರುವ ಈ ಕಾಲದಲ್ಲಿ ಹರವೆ ಹೋಬಳಿ ಬೆಟ್ಟದಪುರ ಗ್ರಾಮದ ರೈತರು ಸಾವಯವ ಕೃಷಿಯತ್ತ ಆಸಕ್ತಿ ತೋರಿದ್ದಾರೆ ಎಂದು ಕೀಟ ಶಾಸ್ತ್ರಜ್ಞ ಡಾ. ಶಿವರಾಯ್ ನಾವಿ ಹೇಳಿದರು.

ತಾಲೂಕಿನ ಬೆಟ್ಟದಪುರ ಗ್ರಾಮದಲ್ಲಿ ಕೃಷಿ ವಿಶ್ವವಿದ್ಯಾನಿಲಯ ಬೆಂಗಳೂರು ಹಾಗೂ ಕೃಷಿ ಮಹಾವಿದ್ಯಾಲಯ ಚಾಮರಾಜನಗರ ಸಹಯೋಗದಲ್ಲಿ ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರದ ಅಂಗವಾಗಿ ಮಂಗಳವಾರ ಆಯೋಜಿಸಿದ್ದ ಅರಿಶಿನ ಮತ್ತು ತೆಂಗು ಬೆಳೆ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ರೈತರು ಗ್ರಾಮದಲ್ಲಿ ಬೆಳೆಯುವ ಅರಿಶಿಣ ಮತ್ತು ತೆಂಗಿನಲ್ಲಿ ಕಂಡುಬರುವ ರೋಗ ಹಾಗೂ ಕೀಟಗಳ ನಿರ್ವಹಣೆಯನ್ನು ಜೈವಿಕವಾಗಿ ಮಾಡಬೇಕು. ಕೊಟ್ಟಿಗೆ ಗೊಬ್ಬರದ ತಯಾರಿಕೆ ಮತ್ತು ಬಳಕೆ ಸಾವಯವ ಕೃಷಿಗೆ ಸಹಕಾರಿಯಾಗಿದೆ. ರೈತರು ಕೀಟ ಹಾಗೂ ರೋಗಗಳ ಹಲವಾರು ಜೈವಿಕ ನಿಯಂತ್ರಣ ಕ್ರಮಗಳನ್ನು ಮನದಟ್ಟು ಮಾಡಿಕೊಳ್ಳಬೇಕು ಎಂದರು.

ಶಿಬಿರದಲ್ಲಿ ಡಾ.ಜಿ .ನಾಗೇಶ್, ಡಾ. ಎಚ್.ಟಿ .ನಾಗರಾಜ್, ಡಾ.ಕಾಂಬಳೆ, ಡಾ.ರವೀಂದ್ರ, ಗ್ರಾ.ಪಂ ಅಧ್ಯಕ್ಷ ಶಿವಕುಮಾರ್, ಸದಸ್ಯರಾದ ಸುಭದ್ರಮ್ಮ, ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಚನ್ನಬಸಪ್ಪ ಹಾಗೂ ಇತರರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net