ಕರವೇ ಕಾರ್ಯಕರ್ತರಿಗೆ ಗುರುತಿನ ಚೀಟಿ ವಿತರಣೆ

04rajesh5
Published on

ಕೊಳ್ಳೇಗಾಲ: ನಗರ ಘಟಕ ಕರವೇ ಪ್ರವೀಣ್ ಶೆಟ್ಟಿ ಬಣದ ವತಿಯಿಂದ ಪದಾಧಿಕಾರಿಗಳಿಗೆ ಬುಧವಾರ ಗುರುತಿನ ಚೀಟಿಯನ್ನು ಅಧ್ಯಕ್ಷ ಎಂ.ಜಗದೀಶ್ ಶಾಸ್ತ್ರೀ ವಿತರಣೆ ಮಾಡಿದರು.

ಬಳಿಕ ಕರವೇ ಶಲ್ಯವನ್ನು ತೊಡಿಸುವ ಮೂಲಕ ನೂತನ ಸದಸ್ಯರನ್ನು ಘಟಕಕ್ಕೆ ಬರಮಾಡಿಕೊಂಡರು. ನಂತರ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಮಿಸಿದರು.

ಈ ಸಂದರ್ಭದಲ್ಲಿ ಕರವೇ ಪ್ರಧಾನ ಕಾರ್ಯದರ್ಶಿ ಎನ್.ಸುರೇಶ್, ಕಾರ್ಯಧ್ಯಕ್ಷ ಮೊಹಮ್ಮದ್ ಅಪ್ಜಲ್(ಅಜ್ಜು), ಸಂಘಟನಾ ಕಾರ್ಯದರ್ಶಿ ಉಸ್ತುವಾರಿ ಮಹಮ್ಮದ್ ಶಮೀರ್, ಸಹ ಸಂಘಟನಾ ಕಾರ್ಯದರ್ಶಿ ಭೂಪತಿ, ಪತ್ರಿಕಾ ಸಲಹೆಗಾರ ದೊಡ್ಡಿಂದುವಾಡಿ ಸಿದ್ದರಾಜು, ರೇಚಣ್ಣ, ಶಂಕರ, ರೇವಣ್ಣ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net